ADVERTISEMENT

ಗೋಣಿಕೊಪ್ಪಲು ದಸರಾ: ಚಕಿತಗೊಳಿಸಿದ ಬೈಕ್ ಸ್ಟಂಟ್

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2023, 16:02 IST
Last Updated 17 ಅಕ್ಟೋಬರ್ 2023, 16:02 IST
ಗೋಣಿಕೊಪ್ಪಲು ಪಟ್ಟಣದಲ್ಲಿ ದಸರಾ ಉತ್ಸವ ಅಂಗವಾಗಿ ಮಂಗಳವಾರ ಮೈಸೂರಿನ ಎಲ್ ರೈಡರ್ಸ್ ತಂಡದ ಸ್ಯಾಮ್ ಸನ್, ಸೌರಭ್, ಸದಾಬ್ ಸವಾರರು ಬೈಕ್ ವೀಲಿಂಗ್ ನಲ್ಲಿ ನಡೆಸಿದ ಸ್ಟಂಟ್ ಸಹಾಸ ಮೈ ನವಿರೇಳಿಸಿತು.
ಗೋಣಿಕೊಪ್ಪಲು ಪಟ್ಟಣದಲ್ಲಿ ದಸರಾ ಉತ್ಸವ ಅಂಗವಾಗಿ ಮಂಗಳವಾರ ಮೈಸೂರಿನ ಎಲ್ ರೈಡರ್ಸ್ ತಂಡದ ಸ್ಯಾಮ್ ಸನ್, ಸೌರಭ್, ಸದಾಬ್ ಸವಾರರು ಬೈಕ್ ವೀಲಿಂಗ್ ನಲ್ಲಿ ನಡೆಸಿದ ಸ್ಟಂಟ್ ಸಹಾಸ ಮೈ ನವಿರೇಳಿಸಿತು.   

ಗೋಣಿಕೊಪ್ಪಲು: ಒಂದು ಬಾರಿ ಬೈಕ್ ಹ್ಯಾಂಡಲ್ ಹಿಡಿಯದೆ, ಮತ್ತೊಂದು ಸಲ ಒಂದೇ ಚಕ್ರದಲ್ಲಿ, ಇನ್ನೊಂದು ಸಲ ಹಿಮ್ಮುಖವಾಗಿ, ಮಗದೊಮ್ಮೆ ಸೀಟಿನ ಮೇಲೆ ಕೈ ಕಟ್ಟಿ ಹಾಕಿ ಬೈಕ್ ಚಾಲನೆ... ಇವು ಇಲ್ಲಿನ ಬಸ್ ನಿಲ್ದಾಣದಲ್ಲಿ ಮಂಗಳವಾರ ಒಂದೂವರೆ ಗಂಟೆಗೂ ಹೆಚ್ಚು ಸಮಯ ಕಂಡು ಬಂದ ಬೈಕ್ ಸ್ಟಂಟ್‌‌‌‌ನ ರೋಮಾಂಚಕಾರಿ ದೃಶ್ಯ.

ಇಲ್ಲಿನ ಕಾವೇರಿ ದಸರಾ ಸಮಿತಿ ಬಸ್ ನಿಲ್ದಾಣದಲ್ಲಿ ಏರ್ಪಡಿಸಿದ್ದ ಬೈಕ್ ಸ್ಟಂಟ್ ನ ಪ್ರಮುಖ ಪ್ರದರ್ಶನಗಳು.

ಕಾವೇರಿ ದಸರಾದ ಯುವ ದಸರಾ ಉಪ ಸಮಿತಿ ಆಧ್ಯಕ್ಷ ಅಂಕಿತ್ ಪೊನ್ನಪ್ಪ ನೇತೃತ್ವದಲ್ಲಿ ನಡೆದ ಸಾಹಸವನ್ನು ಕಿಕ್ಕಿರಿದ್ದು ನೆರೆದಿದ್ದ ಪ್ರೇಕ್ಷಕರನ್ನು ಸೂಜಿ ಗಲ್ಲಿನಂತೆ ಸೆಳೆಯಿತು.

ADVERTISEMENT

ಮೈಸೂರಿನ ಎಲ್ ರೈಡರ್ಸ್ ತಂಡದ ಸ್ಯಾಮ್ ಸನ್, ಸೌರಭ್, ಸದಾಬ್ ಸವಾರರು ಬೈಕ್ ವೀಲಿಂಗ್ ನಲ್ಲಿ ನಡೆಸಿದ ಸ್ಟಂಟ್ ಸಹಾಸ ಮೈ ನವಿರೇಳಿಸಿತು. ಬೈಕ್ ಅನ್ನು ಕೆಲವು ಸಲ ಕೈ ಹಿಡಿಯದೆ ಕಾಲಿನಲ್ಲಿಯೇ ನಡೆಸಿದರು.

ಮತ್ತೆ ಕೆಲವು ಸಲ ಕೈ, ಕಾಲು ಎರಡನ್ನು ಬಿಟ್ಟು ಬೈಕ್ ಮೇಲೆ ಮಲಗಿ ಕೇವಲ ಎದೆಯಲ್ಲಿಯೇ ಚಾಲಿಸಿದರು. ಈ ಎಲ್ಲಾ ದೃಶ್ಯಗಳು ನೋಡುಗರನ್ನು ಚಕಿತಗೊಳಿಸಿದವು. ಈ ಬೈಕ್ ಸಂಟ್ ಸಾಹಸ ನಡೆಯುವ ಸಂದರ್ಭದಲ್ಲಿ ಪಟ್ಟಣದ ಮುಖ್ಯ ರಸ್ತೆಯಲ್ಲಿ ಚಲಿಸುವ ವಾಹನಗಳನ್ನು ಬೈಪಾಸ್ ರಸ್ತೆಗಾಗಿ ತಿರುಗಿಸಲಾಗಿತ್ತು.

ಸಿಪಿಐ ಗೋವಿಂದರಾಜು, ಸಬ್ ಇನ್ಸ್ ಪೆಕ್ಟರ್ ರೂಪಾದೇವಿ ಹಾಗೂ ಸಿಬ್ಬಂದಿ ವರ್ಗ ಬಂದೋಬಸ್ತ್ ಏರ್ಪಡಿಸಿದ್ದರು. ದಸರಾ ಸಮಿತಿ ಅಧ್ಯಕ್ಷ ಕುಲ್ಲಚಂಡ ಗಣಪತಿ ಉದ್ಘಾಟಿಸಿದರು. ಪ್ರಾಧಾನ ಕಾರ್ಯದರ್ಶಿ ಕಂದಾ ದೇವಯ್ಯ, ಪದಾಧಿಕಾರಿಗಳಾದ ದಿಲನ್ ಚಂಗಪ್ಪ, ರಮೇಶ್, ಶಿವಾಜಿ ಇದ್ದರು.

ಗೋಣಿಕೊಪ್ಪಲು ಪಟ್ಟಣದಲ್ಲಿ ದಸರಾ ಉತ್ಸವ ಅಂಗವಾಗಿ ಮಂಗಳವಾರ ಮೈಸೂರಿನ ಎಲ್ ರೈಡರ್ಸ್ ತಂಡದ ಸ್ಯಾಮ್ ಸನ್ ಸೌರಭ್ ಸದಾಬ್ ಸವಾರರು ಬೈಕ್ ವೀಲಿಂಗ್ ನಲ್ಲಿ ನಡೆಸಿದ ಸ್ಟಂಟ್ ಸಹಾಸ ಮೈ ನವಿರೇಳಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.