ADVERTISEMENT

ಮಡಿಕೇರಿ: ಅಪ್ಪಚ್ಚಕವಿ 158ನೇ ಜನ್ಮದಿನಾಚರಣೆ: ಪುಸ್ತಕಗಳ ಕುರಿತು ಮಾತು,ಕವಿಗೋಷ್ಠಿ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2025, 5:30 IST
Last Updated 21 ಸೆಪ್ಟೆಂಬರ್ 2025, 5:30 IST
ಅಲ್ಲಾರಂಡ ವಿಠಲ ನಂಜಪ್ಪ
ಅಲ್ಲಾರಂಡ ವಿಠಲ ನಂಜಪ್ಪ   

ಮಡಿಕೇರಿ: ಹರದಾಸ ಅಪ್ಪನೆರವಂಡ ಅಪ್ಪಚ್ಚಕವಿ ಅವರ 158ನೇ ಜನ್ಮ ದಿನಾಚರಣೆಯು ಅಲ್ಲಾರಂಡ ರಂಗಚಾವಡಿ ಮತ್ತು ಕೊಡವ ಸಮಾಜದ ವತಿಯಿಂದ ಇಲ್ಲಿನ ಕೊಡವ ಸಮಾಜದಲ್ಲಿ ಸೆ. 21ರಂದು ಬೆಳಿಗ್ಗೆ 10.30ಕ್ಕೆ ನಡೆಯಲಿದೆ ಎಂದು ಅಲ್ಲಾರಂಡ ರಂಗಚಾವಡಿಯ ಅಲ್ಲಾರಂಡ ವಿಠಲ ನಂಜಪ್ಪ ತಿಳಿಸಿದರು.

ಅಪ್ಪಚ್ಚಕವಿ ಕಲಾಭವನದ ನಿರ್ಮಾಣ ಸಮಿತಿ ಅಧ್ಯಕ್ಷ ಅಪ್ಪನೆರವಂಡ ಮನೋಜ್ ಮಂದಪ್ಪ ಕಾರ್ಯಕ್ರಮ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಯಾಗಿ ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಮಂಡುವಂಡ ಮುತ್ತಪ್ಪ ಭಾಗವಹಿಸಲಿದ್ದಾರೆ ಎಂದು ಅವರು ಇಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ನಾನೇ ನಿರ್ದೇಶಿಸಿ, ನಿರ್ಮಿಸಿರುವ ಅಪ್ಪಚ್ಚಕವಿ ಅವರನ್ನು ಕುರಿತ  30 ನಿಮಿಷಗಳ ಸಾಕ್ಷ್ಯಚಿತ್ರದ ಪ್ರದರ್ಶನವನ್ನು ಬರಹಗಾರ್ತಿ ಈರಮಂಡ ಹರಿಣಿ ವಿಜಯ್ ಉದ್ಘಾಟಿಸಲಿದ್ದಾರೆ. ಕೊಡವ ಭಾಷಾ ಸಾಹಿತ್ಯಕ್ಕೆ ಕೊಡುಗೆ ನೀಡಿರುವ ಸಾಹಿತಿ ನಾಗೇಶ್ ಕಾಲೂರು ಅವರನ್ನು ಸನ್ಮಾನಿಸಲಾಗುವುದು ಎಂದು ಅವರು ತಿಳಿಸಿದರು.

ADVERTISEMENT

ವಿವಿಧ ಪುಸ್ತಕಗಳ ಕುರಿತು ಚೆರುವಾಳಂಡ ಸುಜಲ ನಾಣಯ್ಯ, ಕರವಂಡ ಸೀಮಾ ಗಣಪತಿ, ಮಾಳೇಟಿರ ಸೀತಮ್ಮ ವಿವೇಕ್, ಐಚಂಡ ರಶ್ಮಿ ಮೇದಪ್ಪ ಮಾತನಾಡುವರು ಎಂದು ಹೇಳಿದರು.

ಸಾಹಿತಿ ಬೊಟ್ಟೋಳಂಡ ನಿವ್ಯ ದೇವಯ್ಯ ಮಾತನಾಡಿ, ಅಪ್ಪನೆರವಂಡ ಅಪ್ಪಚ್ಚಕವಿಯ ಸ್ಮರಣಾರ್ಥ ಕವಿಗೋಷ್ಠಿಯೂ ನಡೆಯಲಿದ್ದು, 15ರಿಂದ 18 ಕವನಗಳ ವಾಚನ ನಡೆಯಲಿದೆ ಎಂದರು.

ಸಾಹಿತ್ಯಾಸಕ್ತ ಅಯಲಪಂಡ ದೊರೆ ದೇವಯ್ಯ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.