ADVERTISEMENT

ಬೀಟೆ ನಾಟಾ ಅಕ್ರಮ ಸಂಗ್ರಹ: ಬಂಧನ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2021, 4:17 IST
Last Updated 18 ಏಪ್ರಿಲ್ 2021, 4:17 IST
ಬೀಟೆ ನಾಟಾ ಕಳವು ಆರೋಪಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದರು
ಬೀಟೆ ನಾಟಾ ಕಳವು ಆರೋಪಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದರು   

ಸೋಮವಾರಪೇಟೆ: ಸಮೀಪದ ಕಿರಗಂದೂರು ಗ್ರಾಮದ ರಿಪೋನ್ ವ್ಯಾಲಿಡಿ ಕಾಫಿ ಎಸ್ಟೇಟ್‌ನಲ್ಲಿ ಇತ್ತಿಚೆಗೆ ನಡೆದ ಬೀಟೆ ನಾಟಾ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಇಲ್ಲಿನ ಅರಣ್ಯ ಇಲಾಖೆ ಅಧಿಕಾರಿಗಳು ಶುಕ್ರವಾರ ಬಂಧಿಸಿದ್ದಾರೆ.

ಕೂತಿ ಗ್ರಾಮದ ಎಚ್.ಟಿ. ರೋಹಿತ್ ಬಂಧಿತ ಆರೋಪಿ. ನಾಟಾ ಕಳ್ಳತನಕ್ಕೆ ಬಳಸಿದ ಓಮ್ನಿ ಕಾರು, ಮರ ಕತ್ತರಿಸುವ ಯಂತ್ರವನ್ನು ವಶಪಡಿಸಿಕೊಳ್ಳಲಾಗಿದೆ.

ಏ.2 ರಂದು ಎಸ್ಟೇಟ್‌ನಲ್ಲಿ ಅಕ್ರಮವಾಗಿ ಸುಮಾರು ₹ 1.60 ಲಕ್ಷ ಮೌಲ್ಯದ ಬೀಟೆ ಮರದ ನಾಟಾಗಳನ್ನು ಕಡಿದು ಸಂಗ್ರಹಿಸಿಡಲಾಗಿತ್ತು. ಪೊಲೀಸ್ ಅರಣ್ಯ ಸಂಚಾರಿ ದಳದ ಅಧಿಕಾರಿಗಳು ನಾಟಾಗಳನ್ನು ವಶಪಡಿಸಕೊಂಡು ಪ್ರಕರಣ ದಾಖಲಿಸಿದ್ದರು. ಈ ಪ್ರಕರಣದಲ್ಲಿ ಎಸ್ಟೇಟ್‌ ರೈಟರ್ ಶಿವಪ್ಪ ಮೊದಲ ಆರೋಪಿಯಾಗಿದ್ದು, ಅವರ ವಿರುದ್ಧ ದೂರು ದಾಖಲಾಗಿತ್ತು. ಉಳಿದ ಆರೋಪಿಗಳು ತಲೆಮರೆಸಿಕೊಂಡಿದ್ದರು.

ADVERTISEMENT

ಕಾರ್ಯಾಚರಣೆಯಲ್ಲಿ ಡಿಎಫ್ಓ ಪ್ರಭಾಕರನ್, ಎಸಿಎಫ್ ಕೆ.ನೆಹರು ಅವರ ಮಾರ್ಗದರ್ಶನದಲ್ಲಿ ಸೋಮವಾರಪೇಟೆ ವಲಯ ಅರಣ್ಯಾಧಿಕಾರಿ ಶಮಾ, ಡಿಆರ್‌ಎಫ್ಒ ಜಗದೀಶ್, ಅರಣ್ಯ ರಕ್ಷಕರಾದ ಭರಮಪ್ಪ, ದಳವಾಯಿ, ಚೇತನ, ವೀರಪ್ಪ, ಸಿಬ್ಬಂದಿಗಳಾದ ಹರ್ಷಿತ್, ವಿನು, ಸಂತೋಷ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.