ADVERTISEMENT

ಏಷ್ಯನ್ ನೆಟ್‌ ಪ್ಯಾಕ್ ಅವಾರ್ಡ್ ಸ್ಪರ್ಧೆಗೆ ಕೊಡವ ಸಿನಿಮಾ ‘ಪೊಮ್ಮಾಲೆ ಕೊಡಗ್’

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2022, 6:29 IST
Last Updated 27 ಡಿಸೆಂಬರ್ 2022, 6:29 IST
   

ಮಡಿಕೇರಿ: ಕೊಟ್ಟುಕತ್ತೀರ ಪ್ರಕಾಶ್ ಕಾರ್ಯಪ್ಪ ನಿರ್ದೇಶನದ ‘ಪೊಮ್ಮಾಲೆ ಕೊಡಗ್’ ಕೊಡವ ಸಿನಿಮಾ 28ನೇ ಕೋಲ್ಕತ್ತಾ ಅಂತರರಾಷ್ಟ್ರೀಯ ಸಿನಿಮೋತ್ಸವದಲ್ಲಿ ಏಷ್ಯನ್ ನೆಟ್‌ ಪ್ಯಾಕ್ ಅವಾರ್ಡ್ ಸ್ಪರ್ಧೆಗೆ ಆಯ್ಕೆಯಾಗಿದೆ.

ಪಿಐಎಪಿಎಫ್ ಮಾನ್ಯತೆ ಪಡೆದ ಭಾರತದ 5 ಸಿನಿಮೋತ್ಸವಗಳಲ್ಲಿ ಒಂದಾಗಿರುವ ಈ ಚಿತ್ರೋತ್ಸವದಲ್ಲಿ 8 ದೇಶಗಳ ಸಿನಿಮಾಗಳು ಸ್ಪರ್ಧೆಯಲ್ಲಿದ್ದು, 900 ಕ್ಕೂ ಹೆಚ್ಚು ಚಿತ್ರಗಳು ಪ್ರವೇಶಕ್ಕಾಗಿ ಅರ್ಜಿ ಸಲ್ಲಿದ್ದವು. ಇವುಗಳಲ್ಲಿ ಸಾಕ್ಷ್ಯಚಿತ್ರ, ಕಿರುಚಿತ್ರ ಸೇರಿದಂತೆ ಒಟ್ಟು 183 ಚಿತ್ರಗಳು ಮಾತ್ರ ಆಯ್ಕೆಯಾದವು. ಕರ್ನಾಟಕದಿಂದ ಕನ್ನಡ, ತುಳು, ಕೊಡವ, ಬ್ಯಾರಿ ಸೇರಿ ನಾಲ್ಕು ಸಿನಿಮಾಗಳು ಆಯ್ಕೆಯಾಗಿವೆ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT