ಸೋಮವಾರಪೇಟೆ: ಪಟ್ಟಣದ ಆನೆಕೆರೆ ಹಾಗೂ ಸಮೀಪದ ಯಡೂರು ಗ್ರಾಮದ ದೇವರಕೆರೆಗೆ ಶನಿವಾರ ಬಾಗಿನ ಸಲ್ಲಿಸಲಾಯಿತು.
ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಹರಪ್ಪಳ್ಳಿ ರವೀಂದ್ರ ಅವರು ಬೆಳಿಗ್ಗೆ ಯಡೂರು ಗ್ರಾಮದ ದೇವರಕೆರೆಗೆ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಸಿದರು. ನಂತರ ಆನೆಕೆರೆಗೆ ಬಾಗಿನ ಸಲ್ಲಿಸಲಾಯಿತು.
ರವೀಂದ್ರ ಅವರ ಅಭಿಮಾನಿ ಸಂಘದ ಅದ್ಯಕ್ಷ ಎಚ್.ಎ. ನಾಗರಾಜು, ಪದಾಧಿಕಾರಿಗಳಾದ ರಾಜಪ್ಪ, ದೀಪು, ಬಸಪ್ಪ, ತಿಮ್ಮಯ್ಯ, ಖಾಸಿಂ, ದಾಮೋದರ್, ಮೋಹನ್, ಯಡೂರು ಗ್ರಾಮದ ಮಲ್ಲಪ್ಪ, ಕಿರಣ ಹಾಗೂ ಗ್ರಾಮಸ್ಥರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.