
ಕುಶಾಲನಗರ: ಸಮೀಪದ ಬಸಿರುಗುಪ್ಪೆ ಗ್ರಾಮದ ಬಸವೇಶ್ವರ ದೇವಾಲಯ ಸೇವಾ ಟ್ರಸ್ಟ್ ವತಿಯಿಂದ ನೂತನವಾಗಿ ಭದ್ರಕಾಳಿ, ಭಂಟ, ನಾಗರಕಟ್ಟೆ, ಮಾರಿಯಮ್ಮ ಮತ್ತು ಗುಳಿಗ ದೇವರ ಮೂರ್ತಿಗಳ ಪ್ರತಿಷ್ಠಾಪನೆ ಹಾಗೂ ಬ್ರಹ್ಮಕಲಶೋತ್ಸವದ ಅಂಗವಾಗಿ ಎರಡು ದಿನಗಳ ಧಾರ್ಮಿಕ ಕಾರ್ಯಕ್ರಮಗಳಿಗೆ ಗುರುವಾರ ಚಾಲನೆ ನೀಡಲಾಯಿತು.
ಬೆಳಿಗ್ಗೆ 9 ಗಂಟೆಯಿಂದ ಸಾಮೂಹಿಕ ಪ್ರಾರ್ಥನೆ, ಗಣಪತಿ ಪ್ರಾರ್ಥನೆ, ಪೂಜೆ, ಶುದ್ಧ ಪುಣ್ಯಾಹ, ಮಂಡಲ ರಚನೆ, ನಾಗ ಪ್ರಾರ್ಥನೆ, ಗಣಪತಿ ಹೋಮ, ನಾಗ ದೇವರಿಗೆ ಆಶ್ಲೇಷ ಬಲಿ ಪೂಜೆ, ಹೋಮ ಹಾಗೂ ಗೋವು ಪೂಜೆ ಮೊದಲಾದ ಧಾರ್ಮಿಕ ವಿದಿಗಳು ಜರುಗಿದವು.
ಶಾಂತಳ್ಳಿಯ ಗಣೇಶ ಭಟ್ ನೇತೃತ್ವದಲ್ಲಿ ಸೋಮವಾರಪೇಟೆಯ ಜಗದೀಶ್ ಉಡುಪ, ಕೂತಿಯ ವೇದವ್ಯಾಸ್, ವಾದಿರಾಜ್, ಬೆಂಗಳೂರಿನ ವೆಂಕಟೇಶ್ ಹೊಳ್ಳ, ಕುಶಾಲನಗರದ ಕೃಷ್ಣಮೂರ್ತಿ ಭಟ್, ಮಣಿ ಬಜೆಗುಂಡಿ ಧಾರ್ಮಿಕ ಪೂಜಾ ಕೈಂಕಾರ್ಯಗಳು ನಡೆದವು. ಮಹಾಂಮಗಳಾರತಿಯೊಂದಿಗೆ ಭಕ್ತರಿಗೆ ಪ್ರಸಾದ ಹಾಗೂ ಅನ್ನಸಂತರ್ಪಣೆ ನಡೆಸಲಾಯಿತು.
ಬಸವೇಶ್ವರ ದೇವಾಲಯ ಸಮಿತಿ ಅಧ್ಯಕ್ಷ ಸಿ.ಎಸ್.ಶಶಿಕುಮಾರ್, ಸ್ಥಾಪಕ ಅಧ್ಯಕ್ಷ ಧನಂಜಯ, ಕಾರ್ಯದರ್ಶಿ ಹೆಚ್.ಆರ್.ಉದಯಕುಮಾರ್, ಕೆ.ಎಲ್. ಜಸ್ಮಿ,ಶಿಕ್ಷಕರಾದ ಹುಲುಸೆ ಬಸವರಾಜು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.