ADVERTISEMENT

ನಾಪೋಕ್ಲು |ಮಂಡಲಪೂಜೆ: ಶೋಭಾಯಾತ್ರೆ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2025, 7:03 IST
Last Updated 27 ಡಿಸೆಂಬರ್ 2025, 7:03 IST
ಭಾಗಮಂಡಲದಲ್ಲಿ ಅಯ್ಯಪ್ಪ ಸ್ವಾಮಿಯ 43ನೇ ವರ್ಷದ ಮಂಡಲ ಪೂಜೆ ಅಂಗವಾಗಿ ಮೆರವಣಿಗೆ ನಡೆಯಿತು
ಭಾಗಮಂಡಲದಲ್ಲಿ ಅಯ್ಯಪ್ಪ ಸ್ವಾಮಿಯ 43ನೇ ವರ್ಷದ ಮಂಡಲ ಪೂಜೆ ಅಂಗವಾಗಿ ಮೆರವಣಿಗೆ ನಡೆಯಿತು   

ನಾಪೋಕ್ಲು: ಭಾಗಮಂಡಲದಲ್ಲಿ ಅಯ್ಯಪ್ಪ ಸ್ವಾಮಿಯ 43ನೇ ವರ್ಷದ ಮಂಡಲ ಪೂಜೆಯು ಶ್ರದ್ಧಾ ಭಕ್ತಿಯಿಂದ ನೆರವೇರಿತು.

ಪ್ರತಿವರ್ಷದಂತೆ ಈ ವರ್ಷವು ಅಯ್ಯಪ್ಪ ಸ್ವಾಮಿಯ ಮಂಡಲ ಪೂಜೆಯು ಶೋಭಾಯಾತ್ರೆ, ಸಿಂಗಾರಿ ಮೇಳ ಸೇರಿದಂತೆ ವಿವಿಧ ಪೂಜಾ ವಿಧಿ ವಿಧಾನಗಳು ಜೊತೆ ಅದ್ದೂರಿಯಿಂದ ಜರುಗಿತು.

ಗುರುಸ್ವಾಮಿಗಳಾದ ಸಿ.ಆರ್. ಜಯನ್ ಮತ್ತು ಎಚ್.ಎಸ್. ವಸಂತ್ ಅವರ ನೇತೃತ್ವದಲ್ಲಿ ಬೆಳಿಗ್ಗೆ ಭಾಗಮಂಡಲದ ತಲಕಾವೇರಿ ರಸ್ತೆ ಬದಿಯಲ್ಲಿರುವ ಅಯ್ಯಪ್ಪ ಬನದಲ್ಲಿ ಪೂಜೆ ಪ್ರಾರಂಭಿಸಿ ನಂತರ ಸಿಂಗಾರಿ ಮೇಳದೊಂದಿಗೆ ಅಯ್ಯಪ್ಪ ಸ್ವಾಮಿಯ ಶೋಭಾಯಾತ್ರೆಯು ಭಾಗಮಂಡಲದ ಮುಖ್ಯರಸ್ತೆಯಲ್ಲಿ ಸಾಗಿ ಭಗಂಡೇಶ್ವರ ದೇವಾಲಯದ ಮುಂಭಾಗದಲ್ಲಿ ಮಂಡಲ ಪೂಜೆ ನೆರವೇರಿತು.

ADVERTISEMENT

ಮಂಡಲ ಪೂಜೆಯಲ್ಲಿ ಭಾಗಮಂಡಲ, ಕರಿಕೆ ­ಅಯ್ಯಂಗೇರಿ, ದೊಡ್ಡಪುಲಿಕೊಟ್ಟು, ನಾಪೋಕ್ಲು, ಬೆಟ್ಟಗೇರಿ, ಚೆರಂಬಾಣೆ ಅಕ್ಕಪಕ್ಕದ ಊರುಗಳಿಂದ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು ಮತ್ತು ಭಕ್ತರು ಪಾಲ್ಗೊಂಡಿದ್ದರು.­­­­ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.