ADVERTISEMENT

ಮಡಿಕೇರಿ: ಅಂಗನವಾಡಿ ಮೇಲೆ ಬಿದ್ದ ಕೊಂಬೆ, ಸಹಾಯಕಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 8 ಜುಲೈ 2025, 19:40 IST
Last Updated 8 ಜುಲೈ 2025, 19:40 IST
ಸೋಮವಾರಪೇಟೆ ತಾಲ್ಲೂಕಿನ ಗರ್ವಾಲೆ ಗ್ರಾಮದ ಅಂಗನವಾಡಿ ಕೇಂದ್ರದ ಮೇಲೆ ಮರದ ಕೊಂಬೆ ಬಿದ್ದು ಹೆಂಚುಗಳು ಪುಡಿಯಾಗಿರುವುದು 
ಸೋಮವಾರಪೇಟೆ ತಾಲ್ಲೂಕಿನ ಗರ್ವಾಲೆ ಗ್ರಾಮದ ಅಂಗನವಾಡಿ ಕೇಂದ್ರದ ಮೇಲೆ ಮರದ ಕೊಂಬೆ ಬಿದ್ದು ಹೆಂಚುಗಳು ಪುಡಿಯಾಗಿರುವುದು    

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಮಂಗಳವಾರ ಬಿರುಸಿನ ಮಳೆ ಮುಂದುವರೆದಿದೆ.

ಸೋಮವಾರಪೇಟೆ ತಾಲ್ಲೂಕಿನ ಗರ್ವಾಲೆಯಲ್ಲಿ ಅಂಗನವಾಡಿ ಮೇಲೆ ಮರದ ಕೊಂಬೆ ಮುರಿದು ಬಿದ್ದಿದ್ದು, ಸಹಾಯಕಿಗೆ ಪೆಟ್ಟಾಗಿದೆ. ಗಾಯಾಳು ಸಹಾಯಕಿ ಬೇಬಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಂಗನವಾಡಿ ಕಟ್ಟಡಕ್ಕೆ ಹಾನಿಯಾಗಿದೆ.

ಮಡಿಕೇರಿ ನಗರದಲ್ಲಿ ಮಧ್ಯಾಹ್ನದ ನಂತರ ಮಳೆ ಬಿರುಸು ಪಡೆದಿದ್ದು, ಧಾರಾಕಾರವಾಗಿ ಬಿಟ್ಟು ಬಿಟ್ಟು ಸುರಿಯುತ್ತಿದೆ. ಜಿಲ್ಲೆಯ ಬಹುತೇಕ ಭಾಗಗಳಲ್ಲಿ ಸಾಧಾರಣ ಮಳೆಯಾಗಿದೆ.

ADVERTISEMENT

ಶಾಂತಳ್ಳಿ ಮತ್ತು ಶ್ರೀಮಂಗಲದಲ್ಲಿ ತಲಾ 5 ಸೆಂ.ಮೀ, ಭಾಗಮಂಡಲ, ಹುದಿಕೇರಿಯಲ್ಲಿ ತಲಾ 4 ಸೆಂ.ಮೀ, ಕೊಡ್ಲಿಪೇಟೆಯಲ್ಲಿ 3 ಸೆಂ.ಮೀನಷ್ಟು ಮಳೆ ಸುರಿದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.