ADVERTISEMENT

ಹೊಸ ವರ್ಷದಲ್ಲಿ ಗ್ರಾಮೀಣ ಪತ್ರಕರ್ತರಿಗೆ ಬಸ್‌ಪಾಸ್: ಶಾಸಕ ಮಂತರ್ ಗೌಡ

ಸಾರ್ವಜನಿಕರು ಮತ್ತು ಪತ್ರಕರ್ತರ ಆರೋಗ್ಯ ತಪಾಸಣೆ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2024, 12:52 IST
Last Updated 25 ಡಿಸೆಂಬರ್ 2024, 12:52 IST
ಸೋಮವಾರಪೇಟೆ ಸಮೀಪದ ಬಳಗುಂದ ಶಾಲೆಯ ಮೈದಾನದಲ್ಲಿ ಪತ್ರಕರ್ತರ ಕೆಪಿಎಸ್ ಕ್ರಿಕೆಟ್ ಲೀಗ್ ಪಂದ್ಯಾಟವನ್ನು ಶಾಸಕ ಡಾ.ಮಂತರ್ ಗೌಡ ಬ್ಯಾಟಿಂಗ್ ಮಾಡುವ ಮೂಲಕ ಚಾಲನೆ ನೀಡಿದರು. ರಾಜೇಶ್ ನಾಥ ಗುರೂಜಿ ಇದ್ದರು.
ಸೋಮವಾರಪೇಟೆ ಸಮೀಪದ ಬಳಗುಂದ ಶಾಲೆಯ ಮೈದಾನದಲ್ಲಿ ಪತ್ರಕರ್ತರ ಕೆಪಿಎಸ್ ಕ್ರಿಕೆಟ್ ಲೀಗ್ ಪಂದ್ಯಾಟವನ್ನು ಶಾಸಕ ಡಾ.ಮಂತರ್ ಗೌಡ ಬ್ಯಾಟಿಂಗ್ ಮಾಡುವ ಮೂಲಕ ಚಾಲನೆ ನೀಡಿದರು. ರಾಜೇಶ್ ನಾಥ ಗುರೂಜಿ ಇದ್ದರು.   

ಸೋಮವಾರಪೇಟೆ: ಗ್ರಾಮೀಣ ಪತ್ರಕರ್ತರಿಗೂ ಸರ್ಕಾರದ ಸೌಲಭ್ಯಗಳು ಸಿಗಬೇಕು ಎಂಬುದು ನಮ್ಮ ಅಶಯವಾಗಿದೆ. ರಾಜ್ಯದ ಗ್ರಾಮೀಣ ಪತ್ರಕರ್ತರಿಗೆ ಜಿಲ್ಲೆಯಲ್ಲಿ ಕೆಎಸ್ಆರ್‌ಟಿಸಿ ಬಸ್‌ನಲ್ಲಿ ಸಂಚರಿಸಲು ಉಚಿತ ಪಾಸ್ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಹೊಸ ವರ್ಷದಲ್ಲಿ ಈ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು ಎಂದು ಶಾಸಕ ಡಾ. ಮಂತರ್ ಗೌಡ ಹೇಳಿದರು.

ಕೊಡಗು ಪತ್ರಕರ್ತರ ಸಂಘದ ಸೋಮವಾರಪೇಟೆ ತಾಲ್ಲೂಕು ಘಟಕದ ಆಶ್ರಯದಲ್ಲಿ ಸಮೀಪದ ಬಳಗುಂದ ಸರ್ಕಾರಿ ಪ್ರಾಥಮಿಕ ಶಾಲೆಯ ಮೈದಾನದಲ್ಲಿ ಈಚೆಗೆ ಜಿಲ್ಲೆಯ ಪತ್ರಕರ್ತರಿಗೆ ಆಯೋಜಿಸಿದ್ದ ಆರೋಗ್ಯ ಶಿಬಿರ ಮತ್ತು ಪಿ.ಎಸ್. ಕ್ರಿಕೆಟ್ ಲೀಗ್ ಪಂದ್ಯಾವಳಿ ಉದ್ಘಾಟಿಸಿ ಅವರು ಮಾತನಾಡಿದರು.

ಗ್ರಾಮೀಣ ಪತ್ರಕರ್ತರಿಗೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ನಿವೇಶನ ಕಲ್ಪಿಸಲು ಸರ್ಕಾರದೊಂದಿಗೆ ಚರ್ಚಿಸಲಾಗುವುದು. ಪತ್ರಕರ್ತರು ಒಗ್ಗಟ್ಟಿನಲ್ಲಿದ್ದರೆ ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಸುಲಭವಾಗುತ್ತದೆ. ರಾಜಕಾರಣಿಗಳು ಕುರ್ಚಿಗೋಸ್ಕರ ಪರಸ್ಪರ ಕಾಲೆಳೆದುಕೊಳ್ಳುವುದು ಸಾಮಾನ್ಯ. ಆದರೆ, ಅವರಂತೆ ಪತ್ರಕರ್ತರು ಕಿತ್ತಾಡಿಕೊಳ್ಳಬಾರದು ಎಂದು ಹೇಳಿದರು.

ADVERTISEMENT

ಮೈಸೂರಿನ ನಾರಾಯಣ ಸಿಟಿ ಹೆಲ್ತ್ ಕೆರ್ ಸೆಂಟರ್ ವೈದ್ಯರಾದ ನಸ್ರೀನ್ ಮಾತನಾಡಿ, ‘ಎಲ್ಲರೂ ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕಿದೆ. ತಿನ್ನುವ ಆಹಾರ ನಿಯತ್ರಣದಲ್ಲಿ ಇರಬೇಕು. ಮದ್ಯಪಾನ ಮತ್ತು ದೂಮಪಾನದಿಂದ ದೂರ ಇದ್ದಲ್ಲಿ ಯಾವುದೇ ರೋಗದಿಂದ ದೂರ ಉಳಿಯಬಹುದು’ ಎಂದರು.

ಆಖಿಲ ಭಾರತ ಸಂತ ಸಮಿತಿಯ ರಾಜ್ಯ ಕಾರ್ಯದರ್ಶಿ ರಾಜೇಶ್ ನಾಥ ಗುರೂಜಿ ಮಾತನಾಡಿ, ‘ದುಶ್ಚಟಗಳಿಗೆ ಬಿದ್ದವರನ್ನು ಸರಿಪಡಿಸುವ ಪ್ರಯತ್ನ ಮಾಡುವ ಪತ್ರಕರ್ತರು ದುಶ್ಚಟಗಳಿಗೆ ಬಲಿಯಾಗಿ ಅರೋಗ್ಯವನ್ನು ಹಾಳು ಮಾಡಿಕೊಳ್ಳಬಾರದು. ವರ್ಷಕೊಮ್ಮೆ ಅರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು’ ಎಂದು ಹೇಳಿದರು.

ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಎ. ಮುರುಳೀಧರ್ ಮಾತನಾಡಿ, ‘ಗ್ರಾಮೀಣ ಪತ್ರಕರ್ತರಿಗೆ ಸರ್ಕಾರದಿಂದ ಕನಿಷ್ಠ ಭದ್ರತೆ ಒದಗಿಸಬೇಕು’ ಎಂದು ಒತ್ತಾಯಿಸಿದರು.

ರಾಜ್ಯ ಒಕ್ಕಲಿಗರ ಸಂಘದ ಜಿಲ್ಲಾ ನಿರ್ದೇಶಕ ಹರಪಳ್ಳಿ ರವೀಂದ್ರ ಮಾತನಾಡಿ, ಪತ್ರಕರ್ತರು ಯೋಧರಿದ್ದಂತೆ, ಯಾವಾಗಲು ಬೇರೆ ನೋವಿಗೆ ಸ್ಪಂದಿಸುತ್ತಾರೆ. ಸ್ವಾರ್ಥವಿಲ್ಲದೆ ನೊಂದವರ ಕೆಲಸ ಮಾಡಿಕೊಡುತ್ತಾರೆ. ಸಮಾಜದ ಆಗುಹೋಗುಗಳ ಬಗ್ಗೆ ಚರ್ಚಿಸುತ್ತಾರೆ ಎಂದು ಪ್ರಶಂಶಿಸಿದರು.

ಶಿಬಿರದಲ್ಲಿ ಸಾರ್ವಜನಿಕರು ಸೇರಿದಂತೆ ಪತ್ರಕರ್ತರಿಗೆ ಸಾಮಾನ್ಯ ಪರೀಕ್ಷೆ, ಬಿಪಿ, ಶುಗರ್ ಮತ್ತು ಇಸಿಜಿ ಪರೀಕ್ಷೆಗಳನ್ನು ಮಾಡಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಎಚ್.ಆರ್. ಹರೀಶ್ ವಹಿಸಿದ್ದರು. ಬಳಗುಂದ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪಿ.ಎಂ. ಪಾರ್ವತಿ, ಮಡಿಕೇರಿ ಪತ್ರಿಕಾ ಭವನ ಮ್ಯಾನೇಜಿಂಗ್ ಸ್ಥಾಪಕ ಟ್ರಸ್ಟಿ ಟಿ.ಪಿ. ರಮೇಶ್, ಕೆಪಿಸಿಸಿ ಸದಸ್ಯ ಕೆ.ಎ. ಯಾಕೂಬ್, ಉದ್ಯಮಿ ಸುಗುರಾಜ್ ಕುಶಾಲನಗರ, ಒಕ್ಕಲಿಗರ ಯುವ ವೇದಿಕೆ ಜಿಲ್ಲಾಧ್ಯಕ್ಷ ಗಿರೀಶ್ ಮಲ್ಲಪ್ಪ, ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಅನಂತ ಶಯನ, ರೈತ ಹೋರಾಟ ಸಮಿತಿ ಅಧ್ಯಕ್ಷ ಚಕ್ರವರ್ತಿ ಸುರೇಶ್ ಭಾಗವಹಿಸಿದ್ದರು.

ಇದೇ ಸಂದರ್ಭ ಮೈಸೂರಿನ ನಾರಾಯಣ ಹೆಲ್ತ್ ಸಿಟಿ ಸೆಂಟರ್ ವೈದ್ಯರು ಪತ್ರಕರ್ತರು ಹಾಗೂ ಸಾರ್ವಜನಿಕರ ಅರೋಗ್ಯ ತಪಾಸಣೆ ನಡೆಸಿದರು.

ಸೋಮವಾರಪೇಟೆ ಸಮೀಪದ ಬಳಗುಂದ ಶಾಲೆಯ ಮೈದಾನದಲ್ಲಿ ಮೈಸೂರಿನ ನಾರಾಯಣ ಹೆಲ್ತ್ ಸಿಟಿ ಸೆಂಟರ್ ವೈದ್ಯರು ಪತ್ರಕರ್ತರು ಹಾಗೂ ಸಾರ್ವಜನಿಕರ ಅರೋಗ್ಯ ತಪಾಸಣೆ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.