ADVERTISEMENT

ಮಡಿಕೇರಿ-ವಿರಾಜಪೇಟೆ ರಸ್ತೆ ಬಂದ್

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2020, 7:17 IST
Last Updated 6 ಆಗಸ್ಟ್ 2020, 7:17 IST
ಬೇತ್ರಿ ಸೇತುವೆಯಲ್ಲಿ ಕಾವೇರಿ ನದಿ ತುಂಬಿ ಹರಿಯುತ್ತಿದೆ.
ಬೇತ್ರಿ ಸೇತುವೆಯಲ್ಲಿ ಕಾವೇರಿ ನದಿ ತುಂಬಿ ಹರಿಯುತ್ತಿದೆ.   

ಮಡಿಕೇರಿ: ಮಡಿಕೇರಿ–ವಿರಾಜಪೇಟೆ ರಸ್ತೆಯ ಭೇತ್ರಿಯಲ್ಲಿ ಕಾವೇರಿ ನದಿ ಅಪಾಯಕಾರಿ ಮಟ್ಟದಲ್ಲಿ ಹರಿಯುತ್ತಿದ್ದು, ಸುರಕ್ಷತೆಯ ದೃಷ್ಟಿಯಿಂದ ಭೇತ್ರಿ ಸೇತುವೆ ಮೇಲಿನ ಸಂಚಾರ ಬಂದ್ ಮಾಡಲಾಗಿದೆ.

ಮೂರ್ನಾಡು – ಕೊಂಡಂಗೇರಿ- ಹಾಲುಗುಂದ-ವಿರಾಜಪೇಟೆ, ಮಡಿಕೇರಿ – ಮರಗೋಡು-ಕೊಂಡಂಗೇರಿ-ಹಾಲುಗುಂದ-ವಿರಾಜಪೇಟೆ ಹಾಗೂ ಕುಶಾಲನಗರ-ಗುಡ್ಡೆಹೊಸೂರು-ನೆಲ್ಲಿಹುದಿಕೇರಿ- ಸಿದ್ದಾಪುರ- ಅಮ್ಮತ್ತಿ ಮೂಲಕ ವಿರಾಜಪೇಟೆಗೆ ತಲುಪಬಹುದು.

150 ಜನರ ಸ್ಥಳಾಂತರ:ನೆಲ್ಯಹುದಿಕೇರಿ ಹಾಗೂ ಬೆಟ್ಟದಕಾಡು ಗ್ರಾಮದ 150 ಜನರನ್ನು ಸ್ಥಳಾಂತರ ಮಾಡಲಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.