ADVERTISEMENT

ಶನಿವಾರಸಂತೆ: ಮಕ್ಕಳ ಸಂತೆಯಲ್ಲಿ ವ್ಯಾಪಾರ ಜೋರು

​ಪ್ರಜಾವಾಣಿ ವಾರ್ತೆ
Published 7 ಜನವರಿ 2026, 5:12 IST
Last Updated 7 ಜನವರಿ 2026, 5:12 IST
<div class="paragraphs"><p>ಆಲೂರುಸಿದ್ದಾಪುರ ಜಾನಕಿ ಕಾಳಪ್ಪ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ಮಕ್ಕಳ ಸಂತೆ</p></div>

ಆಲೂರುಸಿದ್ದಾಪುರ ಜಾನಕಿ ಕಾಳಪ್ಪ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ಮಕ್ಕಳ ಸಂತೆ

   

ಶನಿವಾರಸಂತೆ: ಇಲ್ಲಿಗೆ ಸಮೀಪದ ಆಲೂರುಸಿದ್ದಾಪುರ ಜಾನಕಿ ಕಾಳಪ್ಪ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಈಚೆಗೆ ನಡೆದ ಮಕ್ಕಳ ಸಂತೆ ಗಮನ ಸೆಳೆಯಿತು.

ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳು ತಮ್ಮ ಮನೆಗಳಲ್ಲಿ ಬೆಳೆದ ತರಕಾರಿ, ಸೊಪ್ಪು, ಹಣ್ಣು ಹಂಪಲುಗಳನ್ನು ತಂದು ಮಾರಾಟ ಮಾಡಿದರು.

ADVERTISEMENT

ಪೋಷಕರು ಮತ್ತು ಸಾರ್ವಜನಿಕರು ಮಕ್ಕಳ ಸಂತೆಗೆ ಬಂದು ತರಕಾರಿ ಇತರೆ ವಸ್ತುಗಳನ್ನು ಖರೀದಿಸಿದರು. ಮಕ್ಕಳು ಗ್ರಾಹಕರನ್ನು ತಾನು ತಂದಿರುವ ತರಕಾರಿ, ಸೊಪ್ಪನ್ನು ಖರೀದಿಸುವಂತೆ ಕೂಗಿ ಕರೆಯುತ್ತಿದ್ದರು.

ತೆಂಗಿನಕಾಯಿಗೆ ₹10, ಟೊಮೆಟೊ ₹ 10, ಸೊಪ್ಪು ಕಟ್ಟಿಗೆ ₹ 5, ಎಲೆಕೋಸು ₹ 10, ಹುತ್ತರಿಗೆಣಸು ₹ 10, ಕ್ಯಾರೆಟ್ ₹ 10, ಹಲಸಂದೆ ಕಟ್ಟಿಗೆ ₹ 5, ಮೆಣಸಿನಕಾಯಿ ಗುಡ್ಡೆಗೆ ₹ 5, ಜೋಳ ₹ 5 ಮಾರಾಟ ಮಾಡುತ್ತಿದ್ದರೆ ಚುರುಮುರಿಗೆ ₹ 5, ತಂಪುಪಾನೀಯ ಲೋಟಕ್ಕೆ ₹ 5 ಮತ್ತು ಮನೆಯಲ್ಲಿ ತಯಾರಿಸಿದ ವಿವಿಧ ತಿಂಡಿ ತಿನಿಸುಗಳಿಗೆ ₹ 5 ನಂತೆ ಮಾರಾಟ ಮಾಡುತ್ತಿದ್ದರು.

ಮಕ್ಕಳ ಸಂತೆಗೆ ಬಂದ ಗ್ರಾಹಕರು ತರಕಾರಿ, ಸೊಪ್ಪು, ತೆಂಗಿನಕಾಯಿ ಮತ್ತಿತ್ತರ ವಸ್ತುಗಳನ್ನು ಖರಿದಿಸುತ್ತಿದ್ದರು. ಶಾಲೆಯ ಮುಖ್ಯ ಶಿಕ್ಷಕಿ ಸರಿತಾ ಶಿವಪ್ರಕಾಶ್ ಮಾರ್ಗದರ್ಶನದಂತೆ ಮಕ್ಕಳ ಸಂತೆಯಲ್ಲಿ ಸಹ ಶಿಕ್ಷಕರಾದ ಪೂಜಾ, ಜಯಂತಿ, ರಕ್ಷಿತಾ, ಪ್ರಪುಲ್ಲ, ಚೈತ್ರಾ, ಮಲ್ಲಿಕಾ, ಶ್ವೇತಾ, ಕವನ, ಶಿಲ್ಪ, ಸ್ವಾತಿ, ಸ್ಮಿತಾ ಹಾಗೂ ಪೋಷಕರ ಸಮಿತಿಯವರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.