ಸಿದ್ದಾಪುರ: ಛತ್ತೀಸಗಢದಲ್ಲಿ ಕೇರಳದ ಇಬ್ಬರು ಕ್ರೈಸ್ತ ಸನ್ಯಾಸಿನಿಯರ ಬಂಧನ ಖಂಡಿಸಿ ಸಿದ್ದಾಪುರದ ಸಂತ ಜೋಸೆಫರ ದೇವಾಲಯದಿಂದ ಪ್ರತಿಭಟನೆ ನಡೆಸಲಾಯಿತು.
ಕೇರಳ ರಾಜ್ಯದ ಕ್ರೈಸ್ತ ಸನ್ಯಾಸಿನಿಯರನ್ನು ವಿನಾಕಾರಣ ಬಂಧಿಸಲಾಗಿದ್ದು, ಪ್ರಕರಣ ದಾಖಲಿಸಲಾಗಿದೆ. ಕೂಡಲೇ ಪ್ರಕರಣ ಹಿಂಪಡೆಯಬೇಕು ಹಾಗೂ ಬಂಧನಕ್ಕೆ ಕಾರಣರಾದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಧರ್ಮಗುರುಗಳಾದ ಫಾ. ಮೈಕಲ್ ಮರಿ, ಸಿಸ್ಟರ್ ಮರಿಜೋರಿ, ಪ್ರಮುಖರಾದ ಜಾನ್ಸನ್, ಸನಿಲ್, ಜೋಸೆಫ್ ಶ್ಯಾಂ ಹಾಜರಿದ್ದರು.
ಪ್ರಗತಿಪರ ಸಂಘಟನೆಯಿಂದ ಪ್ರತಿಭಟನೆ: ಛತ್ತೀಸಗಢದ ಘಟನೆ ಸಂಬಂಧಿಸಿದಂತೆ ಸಿದ್ದಾಪುರದ ಪ್ರಗತಿಪರ ಸಂಘಟನೆ ವತಿಯಿಂದ ಸಿದ್ದಾಪುರದ ಬಸ್ ನಿಲ್ದಾಣದಲ್ಲಿ ಮಾನವ ಸರಪಳಿ ರಚಿಸಿ ಪ್ರತಿಭಟನೆ ನಡೆಸಲಾಯಿತು.
ಸಂಘಟನೆ ಪ್ರಮುಖರಾದ ಎನ್.ಡಿ.ಕುಟ್ಟಪ್ಪನ್, ಎಚ್.ಬಿ. ರಮೇಶ, ಪಿ.ಆರ್ ಭರತ್ ಹಾಗೂ ಕ್ರೈಸ್ತರು ಮತ್ತು ವಿವಿಧ ಸಂಘಟನೆ ಪದಾಧಿಕಾರಿಗಳು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.