ADVERTISEMENT

ದಸರಾ ಉದ್ಘಾಟನೆ: ದೀಪಾ ಭಾಸ್ತಿಗೂ ಆಹ್ವಾನ ನೀಡಿ; ಎಚ್. ವಿಶ್ವನಾಥ್

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2025, 2:48 IST
Last Updated 2 ಸೆಪ್ಟೆಂಬರ್ 2025, 2:48 IST
   

ಮಡಿಕೇರಿ: ‘ಈಗಲೂ ತಡವಾಗಿಲ್ಲ ಸರ್ಕಾರ ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಅವರೊಂದಿಗೆ ದೀಪಾ ಭಾಸ್ತಿ ಅವರಿಗೂ ಆಹ್ವಾನ ನೀಡಬೇಕು. ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿ ಇಬ್ಬರಿಗೂ ಸಮಾನವಾಗಿ ಬಂದಿದೆ ಎಂಬುದನ್ನು ಇನ್ನಾದರೂ ಸರ್ಕಾರ ಪರಿಗಣಿಸಲಿ’ ಎಂದು ವಿಧಾನಪರಿಷತ್ ಸದಸ್ಯ ಅಡಗೂರು ಎಚ್.ವಿಶ್ವನಾಥ್ ಒತ್ತಾಯಿಸಿದರು.

ನಗರದ ಹೊರವಲಯದಲ್ಲಿ ಅವರು ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದರು.

ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಅವರನ್ನು ಆಯ್ಕೆ ಮಾಡಿರುವುದು ಸರಿಯಾಗಿಯೇ ಇದೆ. ಆದರೆ, ಇಬ್ಬರನ್ನೂ ಒಂದೇ ರೀತಿಯಾಗಿ ನೋಡದೇ ಎಡವಿದೆ. ಈಗಲೂ ಕಾಲ ಮಿಂಚಿಲ್ಲ. ಅರಮನೆಯಲ್ಲಿ ಇಬ್ಬರಿಗೂ ಸನ್ಮಾನ ಮಾಡಬಹುದು. ಈ ನಿಟ್ಟಿನಲ್ಲಿ ಸರ್ಕಾರ ಚಿಂತಿಸಲಿ ಎಂದರು.

ADVERTISEMENT

ಧರ್ಮಸ್ಥಳ ಕುರಿತು ಎನ್‌ಐಎ ತನಿಖೆ ಅಗತ್ಯ ಇಲ್ಲ. ಆದರೆ, ಈಗ ನಡೆಯುತ್ತಿರುವ ಎಸ್ಐಟಿ ತನಿಖೆಯ ವರದಿ ಬೇಗ ಬರುವಂತೆ ಮಾಡಬೇಕು ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.