ADVERTISEMENT

ಡೆಂಗಿ: ನಲ್ವತ್ತೊಕ್ಲಿನಲ್ಲಿ ಜನ ಜಾಗೃತಿ

​ಪ್ರಜಾವಾಣಿ ವಾರ್ತೆ
Published 14 ಜುಲೈ 2024, 5:15 IST
Last Updated 14 ಜುಲೈ 2024, 5:15 IST
ಗೋಣಿಕೊಪ್ಪಲು ಬಳಿಯ ಬಿಳುಗುಂದ ನಲ್ವತ್ತೊಕ್ಲಿನಲ್ಲಿ ಡೆಂಗ್ಯು ಬಗ್ಗೆ ಸಾರ್ವಜನಿಕ ಜಾಗೃತಿ ಮೂಡಿಸುತ್ತಿರುವ ತಂಡ
ಗೋಣಿಕೊಪ್ಪಲು ಬಳಿಯ ಬಿಳುಗುಂದ ನಲ್ವತ್ತೊಕ್ಲಿನಲ್ಲಿ ಡೆಂಗ್ಯು ಬಗ್ಗೆ ಸಾರ್ವಜನಿಕ ಜಾಗೃತಿ ಮೂಡಿಸುತ್ತಿರುವ ತಂಡ   

ಗೋಣಿಕೊಪ್ಪಲು: ಹೆಚ್ಚುತ್ತಿರುವ ಡೆಂಗಿ ರೋಗ ನಿಯಂತ್ರಣ ಮತ್ತು ನಿಮೂರ್ನನೆಗಾಗಿ ಸಾರ್ವಜನಿಕ ಜನಜಾಗೃತಿ ಕಾರ್ಯಕ್ರಮ ಬಿಳುಗುಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಲ್ವತ್ತೊಕ್ಲು ಗ್ರಾಮದಲ್ಲಿ ಶನಿವಾರ ನಡೆಯಿತು.

ಜಿಲ್ಲೆಯಲ್ಲಿ ಹರಡುತ್ತಿರುವ ಡೆಂಗಿ ತಡೆಗೆ  ಆರೋಗ್ಯ ಇಲಾಖೆಯ ನಿರ್ದೆಶನದಂತೆ ಬಿಳುಗುಂದ ಗ್ರಾಮ ಪಂಚಾಯಿತಿ ಸದಸ್ಯ ಪಿ.ಎ. ಹನೀಫ್ ನೇತೃತ್ವದಲ್ಲಿ  ಆಶಾ ಕಾರ್ಯಕರ್ತೆಯರು ಮನೆಗಳಿಗೆ ತೆರಳಿ ಜಾಗೃತಿ ಮೂಡಿಸಿದರು.

  ಸೊಳ್ಳೆಗಳ ಲಾರ್ವಾ ನಾಶಗೊಳಿಸುವ ಬಗ್ಗೆ , ಜ್ವರ ಖಾತ್ರಿಯಾದರೆ ರೋಗಿಯು ಮನೆಯಲ್ಲೇ ಸರಿಯಾದ ವಿಶ್ರಾಂತಿ ತೆಗೆದುಕೊಳ್ಳಬೇಕು  ಎಂದು ತಿಳುವಳಿಕೆ ನೀಡಲಾಯಿತು.

ADVERTISEMENT

 ಡೆಂಗಿ ವೈರಸ್ ತಡೆಗಟ್ಟಲು  ನಿರ್ದಿಷ್ಟ ಲಸಿಕೆಯನ್ನು ಕಂಡುಹಿಡಿಯಲಾಗಲಿಲ್ಲ. ಜ್ವರವನ್ನು ತಡೆಗಟ್ಟಲು ಸೊಳ್ಳೆ ಕಡಿತವನ್ನು ತಪ್ಪಿಸುವುದು ಒಂದೇ ಸೂಕ್ತ ಪರಿಹಾರ ಎಂದು ಎಂದು ಹನೀಫ್  ತಿಳಿಸಿದರು. ಕೆ.ಎ. ಜುಬೈರ್, ಡಿ.ಎಂ.ಮುಸ್ತಫಾ, ಪಿ.ಎ.ನೌಫಲ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.