ADVERTISEMENT

ಬಸವನಹಳ್ಳಿ: ಶರಣ ಸಂಸ್ಕೃತಿ ಪ್ರಸಾರ ದತ್ತಿ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2024, 14:15 IST
Last Updated 1 ಆಗಸ್ಟ್ 2024, 14:15 IST
ಕುಶಾಲನಗರ ಸಮೀಪದ ಬಸವನಹಳ್ಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ವತಿಯಿಂದ ಏರ್ಪಡಿಸಿದ್ದ ಸುತ್ತೂರು ಜಗದ್ಗುರು ಗುರುಚನ್ನಬಸವ ಶಿವಾಚಾರ್ಯರ ದತ್ತಿ ಕಾರ್ಯಕ್ರಮವನ್ನು ಮಹಾತ್ಮಗಾಂಧಿ ಕಾಲೇಜಿನ ಪ್ರಾಂಶುಪಾಲ ಪ್ರೊ.ಹೆಚ್.ಬಿ.ಲಿಂಗಮೂರ್ತಿ ಉದ್ಘಾಟಿಸಿದರು
ಕುಶಾಲನಗರ ಸಮೀಪದ ಬಸವನಹಳ್ಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ವತಿಯಿಂದ ಏರ್ಪಡಿಸಿದ್ದ ಸುತ್ತೂರು ಜಗದ್ಗುರು ಗುರುಚನ್ನಬಸವ ಶಿವಾಚಾರ್ಯರ ದತ್ತಿ ಕಾರ್ಯಕ್ರಮವನ್ನು ಮಹಾತ್ಮಗಾಂಧಿ ಕಾಲೇಜಿನ ಪ್ರಾಂಶುಪಾಲ ಪ್ರೊ.ಹೆಚ್.ಬಿ.ಲಿಂಗಮೂರ್ತಿ ಉದ್ಘಾಟಿಸಿದರು   

ಕುಶಾಲನಗರ: ಮನುಷ್ಯನ ನೋವು - ನಲಿವು, ದುಃಖ - ದುಮ್ಮಾನಗಳು ಹಾಗೂ ಆತನ ನಾಶಕ್ಕೆ ಆಸೆಗಳೇ ಕಾರಣ ಎಂದು ಇಲ್ಲಿನ ಮಹಾತ್ಮಗಾಂಧಿ ಕಾಲೇಜಿನ ಪ್ರಾಂಶುಪಾಲ ಪ್ರೊ. ಎಚ್.ಬಿ.ಲಿಂಗಮೂರ್ತಿ ಹೇಳಿದರು.

ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ವತಿಯಿಂದ ಬಸವನಹಳ್ಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಏರ್ಪಡಿಸಿದ್ದ ಸುತ್ತೂರು ಜಗದ್ಗುರು ಗುರುಚನ್ನಬಸವ ಶಿವಾಚಾರ್ಯರ ದತ್ತಿ ಕಾರ್ಯಕ್ರಮ ಶರಣ ಸಂಸ್ಕೃತಿ ಪ್ರಸಾರ ಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು.

ಬಸವಾದಿ ಶರಣರು ಹನ್ನೆರಡನೇ ಶತಮಾನದಲ್ಲಿ ಅನುಭವ ಮಂಟಪವನ್ನು ಸ್ಥಾಪಿಸಿ ನಡೆ ನುಡಿಗಳೆರಡು ಒಂದಾಗಿಸಿಕೊಂಡ ಎಲ್ಲಾ ಜಾತಿ ಸಮುದಾಯಗಳ ವಚನಕಾರರನ್ನು ಸೇರಿಸಿ ನಾಡಿಗೆ ಸಾರಿದ ಸಂದೇಶಗಳನ್ನು ನಾವು ಪಾಲಿಸಿದ್ದೇ ಆದಲ್ಲಿ, ಜನಹಿತ ಹಾಗೂ ಲೋಕಹಿತ ಅಗ್ರಪಂಕ್ತಿಯಲ್ಲಿರುತ್ತದೆ ಎಂದು ಹೇಳಿದರು.

ADVERTISEMENT

ಸಾಹಿತಿ ಲೀಲಾಕುಮಾರಿ ತೊಡಿಕಾನ ಮಾತನಾಡಿ, ಮನುಷ್ಯನ ದೇಹವೆಂಬ ಬಂಡಿಯನ್ನು ಓಡಿಸುವ ಪಂಚೇಂದ್ರಿಯಗಳನ್ನು ನಿಗ್ರಹಿಸುವ ಅಥವಾ ಸ್ವಯಂ ನಿಯಂತ್ರಿಸುವ ಶಕ್ತಿ ಮನುಷ್ಯನಿಗಿದ್ದರೆ ಆತನಿಗೆ ನೋವು, ಸಂಕಟಗಳೇ ಇರುವುದಿಲ್ಲ. ಇವನಾರವ ಎನ್ನದೇ ಇವ ನಮ್ಮವನೆಂಬ ಅಭಿಮಾನವನ್ನು ಸರ್ವರೂ ಮನಗಾಣಬೇಕು ಎಂದರು.

ಇಂದಿನ ಮಕ್ಕಳು ಬಸವಣ್ಣನವರ ಕಲಬೇಡ ಕೊಲಬೇಡ ಎಂಬ ಒಂದೇ ಒಂದು ವಚನದ ಸಾರವನ್ನರಿತು ಅದರಂತೆ ನಡೆದಲ್ಲಿ ಮನುಷ್ಯನ ಬದುಕು ಸ್ವರ್ಗವಾಗುತ್ತದೆ ಎಂದರು. ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲೆ ಶ್ರೀದೇವಿ ಮಾತನಾಡಿದರು.

ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎಸ್.ಮೂರ್ತಿ, ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಕಾರ್ಯದರ್ಶಿ ಬಿ.ನಟರಾಜು, ಪ್ರಗತಿ ಪರ ಕೃಷಿಕ ಸತ್ಯ, ಶಾಲೆಯ ಸಂಗೀತ ಶಿಕ್ಷಕ ಪುಟ್ಟರಾಜು ಅಕ್ಕಮಹಾದೇವಿಯ ವಚನವನ್ನು ಸುಶ್ರಾವ್ಯವಾಗಿ ಹಾಡಿದರು. ಕನ್ನಡ ಶಿಕ್ಷಕ ಕೆ.ಆರ್.ರಮೇಶ್ ನಿರೂಪಿಸಿದರು. ಗಿರೀಶ್ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.