
ನಾಪೋಕ್ಲು: ಲಕ್ನೋದಲ್ಲಿ ನಡೆದ 19ನೇ ರಾಷ್ಟ್ರೀಯ ಡೈಮಂಡ್ ಜುಬಿಲಿ ಸ್ಕೌಟ್ಸ್ ಜಂಬೂರಿ ಕಾರ್ಯಕ್ರಮದಲ್ಲಿ ಇಲ್ಲಿನ ಅಂಕುರ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಸ್ಕೌಟ್ಸ್ ವಿದ್ಯಾರ್ಥಿಗಳಾದ ಲಿತನ್ ಪೂಣಚ್ಚ, ಧೀಮಂತ್ ಎ.ಎಸ್., ಪೊನ್ನಣ್ಣ ಬಿ.ಎನ್., ವಿಹಾನ್ ಕರು೦ಬಯ್ಯ, ತನುಷ್ ಎಂ.ಬಿ., ಬೆಳ್ಳಿಪ್ಪ ಬಿ. ಹಾಗೂ ಸ್ಕೌಟ್ಸ್ ಮಾಸ್ಟರ್ ಮಹೇಶ್ ಭಾಗವಹಿಸಿ ಕೊಡಗಿಗೆ ಕೀರ್ತಿಯನ್ನು ತಂದಿದ್ದಾರೆ.
ಶಾಲಾ ಅಧ್ಯಕ್ಷ ರಾಜಾ ಚರ್ಮಣ್ಣ, ಕಾರ್ಯದರ್ಶಿ ರತ್ನ ಚರ್ಮಣ್ಣ, ಸ್ಕೌಟ್ಸ್ ಸ್ಥಳೀಯ ಸಂಸ್ಥೆ ಸಂಪಾಜೆಯ ಅಧ್ಯಕ್ಷ ಧನಂಜಯ, ಕಾರ್ಯದರ್ಶಿ ಉಷಾರಾಣಿ, ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.