ಕುಶಾಲನಗರ: ಕೊಡಗು ಜಿಲ್ಲೆಯ ಪ್ರಮುಖ ಪ್ರವಾಸಿ ತಾಣವಾದ ದುಬಾರೆ ಸಾಕಾನೆ ಶಿಬಿರದಿಂದ ಮೈಸೂರು ವಿಶ್ವವಿಖ್ಯಾತ ದಸರಾ ಮಹೋತ್ಸವಕ್ಕೆ ಭಾನುವಾರ ಗಜಪಯಣಕ್ಕೆ ಚಾಲನೆ ನೀಡಲಾಯಿತು.
ಶಿಬಿರದ ಸಾಕಾನೆಗಳಾದ ವಿಕ್ರಂ, ಧನಂಜಯ ಹಾಗೂ ಕಾವೇರಿ ಆನೆಗಳಿಗೆ ಸಾಂಪ್ರದಾಯಿಕ ಪೂಜೆ ಸಲ್ಲಿಸಿ ಮೊದಲ ಹಂತದ ಆನೆಗಳ ತಂಡಕ್ಕೆ ಬೀಳ್ಕೊಡಲಾಯಿತು.
ಕಾವೇರಿ ನದಿ ದಂಡೆ ಮೇಲಿರುವ ಸಾಕಾನೆ ಶಿಬಿರದಲ್ಲಿ ಮೂರು ಸಾಕಾನೆಗಳಿಗೆ ಮಾವುತರು ಪೂಜೆ ಸಲ್ಲಿಸಿ ಹಣ್ಣು ಹಂಪಲುಗಳನ್ನು ನೀಡಿ ನಂತರ ಲಾರಿಗಳ ಮೂಲಕ ಮೈಸೂರಿಗೆ ತೆರಳಿದರು. ಆನೆಗಳೊಂದಿಗೆ ಮಾವುತರು ಹಾಗೂ ಕುಟುಂಬದವರು ತೆರಳಿದರು. ಈ ಸಂದರ್ಭ ದುಬಾರೆ ಉಪ ವಲಯ ಅರಣ್ಯಾಧಿಕಾರಿ ರಂಜನ್, ಸಿಬ್ಬಂದಿ ಹಾಗೂ ಮಾವುತರು ಹಾಗೂ ಕಾವಾಡಿಗರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.