ADVERTISEMENT

ಕಾಡಾನೆ ದಾಳಿ: ಆಟೋ ಹಾನಿ

​ಪ್ರಜಾವಾಣಿ ವಾರ್ತೆ
Published 8 ಜೂನ್ 2024, 7:50 IST
Last Updated 8 ಜೂನ್ 2024, 7:50 IST
ಜಖಂಗೊಡ ಆಟೋರಿಕ್ಷಾ
ಜಖಂಗೊಡ ಆಟೋರಿಕ್ಷಾ   

ಸಿದ್ದಾಪುರ: ಮನೆಯ ಸಮೀಪದಲ್ಲಿ ನಿಲ್ಲಿಸಿದ್ದ ಆಟೋ ರಿಕ್ಷಾ ಮೇಲೆ ಕಾಡಾನೆ ದಾಳಿ ನಡೆಸಿದ ಘಟನೆ ಸಿದ್ದಾಪುರ ಸಮೀಪದ ಬಾಡಗ ಬಾಣಂಗಾಲದಲ್ಲಿ ನಡೆದಿದೆ.

ಇಲ್ಲಿನ ಆಟೋ ಚಾಲಕ ವಿಜಯ್ ಎಂಬುವರು ಎಂದಿನಂತೆ ಮನೆ ಬಳಿ ಆಟೋ ರಿಕ್ಷಾ ನಿಲ್ಲಿಸಿ ಹೊರಗೆ ತೆರಳಿದ್ದರು. ರಾತ್ರಿಯ ವೇಳೆ ನಾಯಿ ಅಟ್ಟಿಸಿಕೊಂಡು ಬಂದ ಕಾಡಾನೆ ಮನೆ ಸಮೀಪದಲ್ಲಿದ್ದ ರಿಕ್ಷಾ ಮೇಲೆ‌ ದಾಳಿ ನಡೆಸಿದೆ.

ಪರಿಣಾಮ ವಾಹನದ ಹಿಂಭಾಗಕ್ಕೆ ಹಾನಿಯಾಗಿದೆ. ಕಾಡಾನೆಗಳು ಕಾಫಿ ತೂಟದಲ್ಲಿ ಬೀಡುಬಿಟ್ಟಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಕಾಡಿಗೆ ಅಟ್ಟಬೇಕೆಂದು ಸ್ಥಳೀಯರು ಒತಾಯಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.