ADVERTISEMENT

ಹುಲಿಗೆ ಅಳವಡಿಸಿದ್ದ ಕ್ಯಾಮೆರಾ ಹಾನಿಗೊಳಿಸಿದ ಆನೆ

​ಪ್ರಜಾವಾಣಿ ವಾರ್ತೆ
Published 14 ಮೇ 2025, 7:06 IST
Last Updated 14 ಮೇ 2025, 7:06 IST
ಕೆಳಗೆ ಬಿದ್ದಿರುವ ಸಿ.ಸಿ ಕ್ಯಾಮೆರಾ
ಕೆಳಗೆ ಬಿದ್ದಿರುವ ಸಿ.ಸಿ ಕ್ಯಾಮೆರಾ   

ಸಿದ್ದಾಪುರ: ಹುಲಿ ಚಲನವಲನ ಅರಿಯಲು ಅಳವಡಿಸಿದ್ದ ಸಿ.ಸಿ ಕ್ಯಾಮರಾವನ್ನು ಕಾಡಾನೆಗಳು ಎಳೆದಾಡಿ, ಹಾನಿಗೊಳಿಸಿರುವ ಘಟನೆ ಬಾಡಗ ಬಾಣಂಗಾಲ ಗ್ರಾಮದಲ್ಲಿ ನಡೆದಿದೆ.

ಗ್ರಾಮದಲ್ಲಿ ಹುಲಿ ಓಡಾಡುತ್ತಿದ್ದು, ಹಸುವನ್ನು ಕೊಂದು ಹಾಕಿತ್ತು. ಹುಲಿಯ ಚಲನವಲನ ತಿಳಿಯಲು ಅರಣ್ಯ ಇಲಾಖೆ ತೋಟದ ಬದಿಯಲ್ಲಿ ಸಿ.ಸಿ ಕ್ಯಾಮೆರಾ ಅಳವಡಿಸಿದ್ದರು. ಬುಧವಾರ ರಾತ್ರಿ ಆನೆಗಳ ಹಿಂಡು ತೋಟದಲ್ಲಿ ಬೀಡುಬಿಟ್ಟಿದ್ದು, ಕ್ಯಾಮೆರಾ ಎಳೆದು ಹಾಕಿ, ಹಾನಿಗೊಳಿಸಿದೆ.

ಸ್ಥಳಕ್ಕೆ ತಿತಿಮತಿ ಉಪವಲಯ ಅರಣ್ಯಾಧಿಕಾರಿ ಶಶಿ, ಆರ್.ಆರ್.ಸಿ ಸಿಬ್ಬಂದಿ ಭೇಟಿ ನೀಡಿ, ಪರಿಶೀಲಿಸಿದ್ದಾರೆ. ಹುಲಿ ಹಾಗೂ ಕಾಡಾನೆ ಹಾವಳಿಯಿಂದ ಗ್ರಾಮಸ್ಥರು ಭಯಭೀತರಾಗಿದ್ದು, ಹುಲಿಯನ್ನು ಸೆರೆಹಿಡಿದು, ಸ್ಥಳಾಂತರಿಸಬೇಕೆಂದು ಒತ್ತಾಯಿಸಿದ್ದಾರೆ.

ADVERTISEMENT

ಹುಲಿ ಸೆರೆಗೆ ಅರಣ್ಯ ಇಲಾಖೆ ಸಿಬ್ಬಂದಿ ಕಳೆದ ನಾಲ್ಕು ದಿನಗಳ ಹಿಂದೆ ಬೋನು ಅಳವಡಿಸಿದ್ದರು. ಇದಲ್ಲದೇ ಸೆರೆಗೆ ಕಾರ್ಯಾಚರಣೆ ನಡೆಸಿದ್ದು, ಹುಲಿಯ ಓಡಾಟ ಪತ್ತೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ತೋಟದಲ್ಲಿ ಇರಿಸಿದ್ದ ಬೋನನ್ನು ತೆಗೆಯಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.