ADVERTISEMENT

ಕಾಫಿ ತೋಟದಲ್ಲಿ ಅಲೆಯುವ ಕಾಡಾನೆ ಹಿಂಡು: ಜನರ ಆತಂಕ

​ಪ್ರಜಾವಾಣಿ ವಾರ್ತೆ
Published 14 ಮೇ 2021, 8:35 IST
Last Updated 14 ಮೇ 2021, 8:35 IST
ಗೋಣಿಕೊಪ್ಪಲು ಬಳಿಯ ಮಾಯಮುಡಿ ಬಳಿ ರಸ್ತೆ ದಾಟುತ್ತಿರುವ ಕಾಡಾನೆಗಳ ಬೃಹತ್ ಹಿಂಡು
ಗೋಣಿಕೊಪ್ಪಲು ಬಳಿಯ ಮಾಯಮುಡಿ ಬಳಿ ರಸ್ತೆ ದಾಟುತ್ತಿರುವ ಕಾಡಾನೆಗಳ ಬೃಹತ್ ಹಿಂಡು   

ಗೋಣಿಕೊಪ್ಪಲು: ಕೋವಿಡ್ ನಿಯಂತ್ರಣಕ್ಕೆ ಹೇರಿರುವ ಲಾಕ್‌ಡೌನ್‌ನಿಂದ ಒಂದು ವಾರದಿಂದ ರಸ್ತೆಯಲ್ಲಿ ಜನರು ಹಾಗೂ ವಾಹನ ಸಂಚಾರ ವಿರಳವಾಗಿದ್ದು ಕೊಡಗು ಜಿಲ್ಲೆಯಲ್ಲಿ ಕಾಡಾನೆಗಳು ರಸ್ತೆಗಳಲ್ಲಿ ಹಿಂಡು ಹಿಂಡಾಗಿ ಸಂಚರಿಸುತ್ತಿರುವ ದೃಶ್ಯ ಸಾಮಾನ್ಯವಾಗಿದೆ.

ನಾಗರಹೊಳೆ ಅರಣ್ಯದಿಂದ 8 ಕಿ.ಮೀ ದೂರವಿರುವ ಬಾಳಾಜಿ, ಮಾಯಮುಡಿ ತೋಟಕ್ಕೆ ಬಂದ 15ಕ್ಕೂ ಹೆಚ್ಚು ಆನೆಗಳಿದ್ದ ಹಿಂಡು ತೋಟದಿಂದ ತೋಟಕ್ಕೆ ನುಗ್ಗುತ್ತಿರುವ ದೃಶ್ಯವನ್ನು ವ್ಯಕ್ತಿಯೊಬ್ಬರು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ.

ರಸ್ತೆಗಳಲ್ಲಿ ಬುಧವಾರ ಸಂಜೆ ಗೋಣಿಕೊಪ್ಪಲಿನಿಂದ ಬಾಳೆಲೆಗೆ ಹೊರಟಿದ್ದ ವ್ಯಕ್ತಿಯೊಬ್ಬರು, ಮಾಯಮುಡಿ ಬಳಿ ದಿಢೀರನೆ ಎದುರಾದ ಆನೆಗಳ ಹಿಂಡನ್ನು ಕಂಡು ಭಯಭೀತರಾಗಿದ್ದಾರೆ. ತೋಟದ ಮಾಲೀಕರು ಪಟಾಕಿ ಸಿಡಿಸಿದಾಗ ಮರಿಗಳಿಂದ ಕೂಡಿದ ಆನೆಗಳ ಹಿಂಡು ಕಾಫಿ ತೋಟದಿಂದ ರಸ್ತೆ ದಾಟಿ ಮತ್ತೊಂದು ತೋಟಕ್ಕೆ ಲೆಗ್ಗೆಯಿಟ್ಟಿವೆ. ಜಿಲ್ಲೆಯ ಅಲ್ಲಲ್ಲಿ ಒಂದು ವಾರದಿಂದ ಈಚೆಗೆ ಕಾಡಾನೆಗಳು ಹಿಂಡು ಹಿಂಡಾಗಿ ಗೋಚರಿಸುತ್ತಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.