ADVERTISEMENT

ಸೋಮವಾರಪೇಟೆ: ಜ.15ರಿಂದ ಕುಮಾರಲಿಂಗೇಶ್ವರ, ದೊಡ್ಡಯ್ಯನ ಜಾತ್ರೆ

​ಪ್ರಜಾವಾಣಿ ವಾರ್ತೆ
Published 12 ಜನವರಿ 2024, 7:39 IST
Last Updated 12 ಜನವರಿ 2024, 7:39 IST
ಸೋಮವಾರಪೇಟೆ ಸಮೀಪದ ಗೊದ್ದು ಗ್ರಾಮದ ಶ್ರೀ ಕುಮಾರಲಿಂಗೇಶ್ವರ ಹಾಗೂ ದೊಡ್ಡಯ್ಯನ ದೇವಸ್ಥಾನದ 353ನೇ ಜಾತ್ರಾ ಮಹೋತ್ಸವದ ನಿಮಿತ್ತ ಸಿದ್ಧತೆಗಳು ನಡೆದಿವೆ
ಸೋಮವಾರಪೇಟೆ ಸಮೀಪದ ಗೊದ್ದು ಗ್ರಾಮದ ಶ್ರೀ ಕುಮಾರಲಿಂಗೇಶ್ವರ ಹಾಗೂ ದೊಡ್ಡಯ್ಯನ ದೇವಸ್ಥಾನದ 353ನೇ ಜಾತ್ರಾ ಮಹೋತ್ಸವದ ನಿಮಿತ್ತ ಸಿದ್ಧತೆಗಳು ನಡೆದಿವೆ   

ಸೋಮವಾರಪೇಟೆ: ತಾಲ್ಲೂಕಿಗೆ ಹೊಂದಿಕೊಂಡಂತಿರುವ ಗೊದ್ದು ಗ್ರಾಮದ ಕುಮಾರಲಿಂಗೇಶ್ವರ ಹಾಗೂ ದೊಡ್ಡಯ್ಯನ ದೇವಸ್ಥಾನದ 353ನೇ ಜಾತ್ರಾ ಮಹೋತ್ಸವ ಜ. 15 ಮತ್ತು 16ರಂದು ನಡೆಯಲಿದ್ದು, ಅಗತ್ಯ ಸಿದ್ಧತೆಗಳು ಭರದಿಂದ ಸಾಗುತ್ತಿವೆ.

15ರಂದು ಕುಮಾರಲಿಂಗೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆಗಳು ನಡೆಯಲಿವೆ. 16ರಂದು ದೊಡ್ಡಯ್ಯನ ಜಾತ್ರೆ ಬೆಳಿಗ್ಗೆ 6ರಿಂದ ಸಂಜೆ 6ರವರೆಗೆ ನಡೆಯಲಿದೆ.

ಈ ಜಾತ್ರಾ ಮಹೋತ್ಸವದಲ್ಲಿ ಗೊದ್ದು, ತಂಬೈಲು, ಹುಡ್ರಮನೆ, ಕೊಂಗಳ್ಳಿ, ತಿಪ್ಪಳ್ಳಿ, ದೊಡ್ಡಗದ್ದೆ, ಮಟ್ಟದ ಗದ್ದೆ, ಹೆಬ್ಬಯಿಲು, ಕೆರೆಹಳ್ಳಿ, ಬ್ಯಾಗಡಹಳ್ಳಿ, ವಣಗೂರು, ಕೂಡುರಸ್ತೆ ಸೇರಿದಂತೆ ಹಲವು ಗ್ರಾಮ ಹಾಗೂ ಜಿಲ್ಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಜನರು ಸೇರುತ್ತಾರೆ.

ADVERTISEMENT

ಕಾರ್ಯಕ್ರಮದಲ್ಲಿ ಹೆಗ್ಗಡಳ್ಳಿ ಮಠದ ಷಡ್ಭಾವರಹಿತೇಶ್ವರ ಶಿವಾಚಾರ್ಯ ಸ್ವಾಮೀಜಿ, ಹಾಸನದ ಶಂಭುನಾಥ ಸ್ವಾಮೀಜಿ ಹಾಗೂ ಹೆಗ್ಗಡಳ್ಳಿ ಮಠದ ಮಲ್ಲಿಕಾರ್ಜುನ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ ಎಂದು ಸಮಿತಿಯ ಅಧ್ಯಕ್ಷ ಹಿಂದೂಶೇಖರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.