ADVERTISEMENT

ಉಚಿತ ಫೂಟ್ ಪಲ್ಸ್ ಥೆರಪಿ ಶಿಬಿರಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 8 ಜೂನ್ 2025, 16:50 IST
Last Updated 8 ಜೂನ್ 2025, 16:50 IST
ಸೋಮವಾರಪೇಟೆ ತಾಲ್ಲೂಕಿನ ಶನಿವಾರಸಂತೆ ಪತ್ರಿಕಾಭವನದಲ್ಲಿ ನಡೆದ 15 ದಿನಗಳ ಉಚಿತ ಫೂಟ್ ಪಲ್ಸ್ ಥೆರಪಿ ಚಿಕಿತ್ಸಾ ಶಿಬಿರವನ್ನು ಕೊಡಗು ಪತ್ರಕರ್ತರ ಸಂಘದ ಸ್ಥಾಪಕ ಅಧ್ಯಕ್ಷ ಎಸ್.ಎ. ಮುರಳೀಧರ್ ಉದ್ಘಾಟಿಸಿದರು 
ಸೋಮವಾರಪೇಟೆ ತಾಲ್ಲೂಕಿನ ಶನಿವಾರಸಂತೆ ಪತ್ರಿಕಾಭವನದಲ್ಲಿ ನಡೆದ 15 ದಿನಗಳ ಉಚಿತ ಫೂಟ್ ಪಲ್ಸ್ ಥೆರಪಿ ಚಿಕಿತ್ಸಾ ಶಿಬಿರವನ್ನು ಕೊಡಗು ಪತ್ರಕರ್ತರ ಸಂಘದ ಸ್ಥಾಪಕ ಅಧ್ಯಕ್ಷ ಎಸ್.ಎ. ಮುರಳೀಧರ್ ಉದ್ಘಾಟಿಸಿದರು    

ಸೋಮವಾರಪೇಟೆ: ‘ರಕ್ತ ಸಂಚಾರ ಸಮಸ್ಯೆ ಮತ್ತು ನರ ಸಂಬಂಧಿತ ಕಾಯಿಲೆಗಳಿಗೆ ಯಾವುದೇ ಔಷಧ ಇಲ್ಲದೆ, ಫೂಟ್ ಪಲ್ಸ್ ಥೆರಪಿ  ಪರಿಣಾಮಕಾರಿಯಾಗಿದೆ, 8 ವರ್ಷ ಮೇಲ್ಪಟ್ಟ ಎಲ್ಲರೂ ಚಿಕಿತ್ಸೆ ಪಡೆಯಬಹುದು’ ಎಂದು ಕಂಪಾನಿಯೋ ಸಂಸ್ಥೆಯ ಥೆರಪಿಯನ್ ಶಶಿಕಾಂತ್ ಪೂಜಾರಿ ತಿಳಿಸಿದರು.

ಶನಿವಾರಸಂತೆಯ ಪತ್ರಿಕಾಭವನದಲ್ಲಿ ಪ್ರಾರಂಭವಾದ 15 ದಿನಗಳ ಉಚಿತ ಫೂಟ್ ಪಲ್ಸ್ ಥೆರಪಿ ಶಿಬಿರದ ಉದ್ಘಾಟನೆ ವೇಳೆ ಅವರು ಮಾಹಿತಿ ನೀಡಿದರು. ಕೊಡಗು ಪತ್ರಕರ್ತರ ಸಂಘ ಸೋಮವಾರಪೇಟೆ ತಾಲ್ಲೂಕು ಘಟಕ ಹಾಗೂ ಕಾಂಪಾನಿಯೋ ಸಂಸ್ಥೆ ಆಶ್ರಯದಲ್ಲಿ  ಆಯೋಜಿಸಲಾಗಿತ್ತು.

 ಥೆರಪಿ ಯಂತ್ರದಲ್ಲಿ ಚಿಕಿತ್ಸೆ ಪಡೆಯುವ ವ್ಯಕ್ತಿಯು ಪ್ರತಿ ದಿನ ಅರ್ಧ ಗಂಟೆಯಲ್ಲಿ ಐದು ಕಿ.ಮೀ.ದೂರದ ವರೆಗೆ ಓಡುವುದಕ್ಕೆ ಸಮನಾಗಿರುತ್ತದೆ.  ದೇಹದ ನರ ನಾಡಿಗಳಲ್ಲಿ ರಕ್ತ ಸಂಚಾರವಾಗುತ್ತದೆ.  ಅಶುದ್ದ ರಕ್ತ ಶುದ್ದಗೊಳ್ಳುತ್ತದೆ. ಹೃದಯ ಸಂಬಂಧಿ ಕಾಯಿಲೆ, ಸೊಂಟ ನೋವು,  ಬೆನ್ನು ನೋವು, ನರ ದೌರ್ಬಲ್ಯ ಸಮಸ್ಯೆಗಳನ್ನು ದೂರ ಮಾಡುತ್ತದೆ. ಈ ಥೆರಪಿ ದೇಶದಲ್ಲಿ 2014 ರಿಂದ ಆರಂಭವಾಗಿದೆ. ಯಂತ್ರವನ್ನು ಕಾಂಪೋನಿಯಾ ಸಂಸ್ಥೆ  ತಯಾರಿಸುತ್ತಿದೆ.  ಸಂಸ್ಥೆಯು  ದೇಶದಲ್ಲಿ 380 ಶಾಖೆಗಳ ಮೂಲಕ 12 ಲಕ್ಷ ಉಚಿತ ಥೆರಪಿ ಶಿಬಿರವನ್ನು ನಡೆಸಿದೆ ಎಂದರು.

ADVERTISEMENT

ಕೊಡಗು ಪತ್ರಕರ್ತರ ಸಂಘದ ಸ್ಥಾಪಕ ಅಧ್ಯಕ್ಷ ಎಸ್.ಎಂ.ಮುರಳೀಧರ್ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ, ಆದುನಿಕತೆ ಹೆಚ್ಚಾದಂತೆ ನಮ್ಮ ಆರೋಗ್ಯ ಕಡೆಗಣನೆಯಾಗುತ್ತಿದೆ.  ಚಿಕ್ಕ ವಯಸಿನಲ್ಲೇ ಸಕ್ಕರೆ ಕಾಯಿಲೆ, ಬಿ.ಪಿ., ಹೃದಯ ಸಂಬಂಧಿ ಕಾಯಿಲೆಗಳಿರುತ್ತವೆ.  ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಆರೋಗ್ಯ ಪರೀಕ್ಷೆ, ಆರೋಗ್ಯ ವಿಮೆ ಮಾಡಿಸಬೇಕು. ವೆಚ್ಚವನ್ನು ಭರಿಸಲು ವ್ಯವಸ್ಥೆ ಮಾಡಿಕೊಳ್ಳಬೇಕು ಎಂದರು.

ಪಂಚಾಯಿತಿ ಸದಸ್ಯ ಎಸ್.ಎನ್.ರಘು ಮಾತನಾಡಿ, ದೇಹ ಸದೃಢಗೊಂಡರೆ ಸದೃಢ ಸಮಾಜ ನಿರ್ಮಾಣವಾಗುತ್ತದೆ. ಪ್ರತಿಯೊಬ್ಬರೂ  ತಮ್ಮ ಆರೋಗ್ ರಕ್ಷಣೆಗೆ ಗಮನ ಹರಿಸಬೇಕು ಎಂದರು. 

ವರ್ತಕರ ಸಂಘದ ಅಧ್ಯಕ್ಷ ಸರ್ದಾರ್ ಆಹಮದ್ ಮಾತನಾಡಿ, ತಾಲ್ಲೂಕು ಪತ್ರಕರ್ತ ಸಂಘ  ಉಚಿತ ಆರೋಗ್ಯ ಶಿಬಿರವನ್ನು ಹಮ್ಮಿಕೊಂಡಿರುವುದು ಸ್ವಾಗರಾರ್ಹ ಎಂದರು.

ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಎಚ್.ಆರ್.ಹರೀಶ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು.  ಪಂಚಾಯಿತಿ ಮಾಜಿ ಅಧ್ಯಕ್ಷೆ ಸರೋಜ ಶೇಖರ್, ಕಳಲೆ ಬಿಜಿಎಸ್ ಸಂಘದ ಉಪಾಧ್ಯಕ್ಷ ಕಳಲೆ ಕೃಷ್ಣೇಗೌಡ, ಕಾಂಪೋನಿಯಾ ಸಂಸ್ಥೆಯ ವಸಂತ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.