ADVERTISEMENT

ಗೋಣಿಕೊಪ್ಪಲು: ನಾಯಿ ದಾಳಿಗೆ ಮೇಕೆಗಳ ಸಾವು

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2023, 5:54 IST
Last Updated 11 ನವೆಂಬರ್ 2023, 5:54 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಗೋಣಿಕೊಪ್ಪಲು: ಕಿರುಗೂರು ಬಳಿಯ ಹೊನ್ನಿಕೊಪ್ಪಲಿನಲ್ಲಿ ಶುಕ್ರವಾರ ನಾಯಿ ದಾಳಿಯಿಂದ ಮೂರು ಮೇಕೆಗಳು ಮೃತಪಟ್ಟಿವೆ.

ಎಂ.ಬಿ.ಸಣ್ಣಪ್ಪ ಅವರಿಗೆ ಸೇರಿದ ಮೇಕೆಗಳನ್ನು ಮೇಯಲು ಗದ್ದೆ ಬಯಲಿನಲ್ಲಿ ಕಟ್ಟಿ ಹಾಕಲಾಗಿತ್ತು. ಈ ವೇಳೆಯಲ್ಲಿ ನಾಯಿಗಳು ದಾಳಿ ನಡೆಸಿರಬಹುದು ಎಂದು ಹೇಳಲಾಗುತ್ತಿದೆ.

ADVERTISEMENT

ಮೇಕೆಗಳ ಹೊಟ್ಟೆ, ಕಾಲುಗಳಿಗೆ ಕಚ್ಚಿ ತೀವ್ರ ಗಾಯಗೊಳಿಸಿವೆ. ಗಾಯಗೊಂಡಿರುವ ಮೇಕೆಗಳು ಸ್ಥಳದಲ್ಲಿಯೇ ಮೃತಪಟ್ಟಿವೆ.

ಸ್ಥಳಕ್ಕೆ ತಿತಿಮತಿ ಆರ್‌ಎಫ್ಒ ಗಂಗಾಧರ ಹಾಗೂ ಸಿಬ್ಬಂದಿ ವರ್ಗದವರು ಭೇಟಿ ನೀಡಿ ಪರಿಶೀಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.