ADVERTISEMENT

ಸುಂಟಿಕೊಪ್ಪ: ಚಿನ್ನದ ಸರ ಕಳವು

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2025, 3:07 IST
Last Updated 16 ಸೆಪ್ಟೆಂಬರ್ 2025, 3:07 IST
ಸುಂಟಿಕೊಪ್ಪ ಹೃದಯಭಾಗದ ಜ್ಯುವೆಲ್ಲರಿ ಮಳಿಗೆಯಲ್ಲಿ ಸರ ಕಳವು ಮಾಡಿದ ಮಹಿಳೆ 
ಸುಂಟಿಕೊಪ್ಪ ಹೃದಯಭಾಗದ ಜ್ಯುವೆಲ್ಲರಿ ಮಳಿಗೆಯಲ್ಲಿ ಸರ ಕಳವು ಮಾಡಿದ ಮಹಿಳೆ    

ಸುಂಟಿಕೊಪ್ಪ: ಪಟ್ಟಣದ ಹೃದಯಭಾಗದಲ್ಲಿರುವ ಪ್ಯಾಶಷನ್ ಜ್ಯುವೆಲ್ಲರಿ ಮಳಿಗೆಯಲ್ಲಿ ಭಾನುವಾರ 22 ಗ್ರಾಂ ತೂಕದ ಚಿನ್ನದ ಸರ ಕಳುವಾಗಿರುವ ಕುರಿತು ಪ್ರಕರಣ ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಭಾನುವಾರ ರಾತ್ರಿ ಮಳಿಗೆ ಮುಚ್ಚುವ ಮೊದಲು ದಾಸ್ತಾನು ಪರಿಶೀಲಿಸುವ ಸಂದರ್ಭ ಚಿನ್ನದ ಸರ ಕಳವು ಆಗಿರುವುದು ಅಂಗಡಿಯವರ ಗಮನಕ್ಕೆ ಬಂದಿದೆ, ತಕ್ಷಣ ಸಿ.ಸಿ ಟಿವಿ ಕ್ಯಾಮೆರಾ ಪರಿಶೀಲಿಸಿದಾಗ ಸಂಜೆ 5 ರ ಸುಮಾರಿಗೆ ಮಗುವಿನೊಂದಿಗೆ ಬಂದಿದ್ದ ಮೂವರು ಮಹಿಳೆಯರು ಈ ಕೃತ್ಯ ಎಸಗಿರುವ ಕಂಡುಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT