ADVERTISEMENT

ಕುಂಡ್ಯೋಳಂಡ ಕಪ್ ಹಾಕಿ ಟೂರ್ನಿ: ಮೇರಿಯಂಡ ತಂಡಕ್ಕೆ ಜಯ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2024, 6:02 IST
Last Updated 18 ಏಪ್ರಿಲ್ 2024, 6:02 IST
ನಾಪೋಕ್ಲುವಿನ ಚೆರಿಯಪರಂಬುವಿನ ಜನರಲ್ ಕೆ.ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕುಂಡ್ಯೋಳಂಡ ಕಪ್ ಹಾಕಿ ಟೂರ್ನಿಯಲ್ಲಿ ಬುಧವಾರ ಕಡೇಮಾಡ ಮತ್ತು ಪಳಂಗಂಡ ತಂಡಗಳ ಆಟಗಾರರು ಗೆಲುವಿಗಾಗಿ ಸೆಣಸಾಡಿದರು
ನಾಪೋಕ್ಲುವಿನ ಚೆರಿಯಪರಂಬುವಿನ ಜನರಲ್ ಕೆ.ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕುಂಡ್ಯೋಳಂಡ ಕಪ್ ಹಾಕಿ ಟೂರ್ನಿಯಲ್ಲಿ ಬುಧವಾರ ಕಡೇಮಾಡ ಮತ್ತು ಪಳಂಗಂಡ ತಂಡಗಳ ಆಟಗಾರರು ಗೆಲುವಿಗಾಗಿ ಸೆಣಸಾಡಿದರು   

ನಾಪೋಕ್ಲು (ಕೊಡಗು ಜಿಲ್ಲೆ): ಮೇರಿಯಂಡ ತಂಡವು ಇಲ್ಲಿನ ಚೆರಿಯಪರಂಬುವಿನ ಜನರಲ್ ಕೆ.ಎಸ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಕುಂಡ್ಯೋಳಂಡ ಕಪ್ ಹಾಕಿ ಟೂರ್ನಿಯ ಪಂದ್ಯದಲ್ಲಿ 4-1 ಅಂತರದಿಂದ ಬಾರಿಯಂಡ ವಿರುದ್ಧ ಜಯ ಸಾಧಿಸಿತು.

ಸಮಬಲದ ಹೋರಾಟ ನಡೆಸಿದ ಸೋಮಯಂಡ ಮತ್ತು ಮಾತ್ರಂಡ ತಂಡಗಳ ಆಟಗಾರರು ಪ್ರೇಕ್ಷಕರನ್ನು ತುದಿಗಾಲಿನಲ್ಲಿ ನಿಲ್ಲಿಸಿದರು. ಬಳಿಕ ಪೆನಾಲ್ಟಿ ಶೂಟ್‌ಔಟ್‌ನಲ್ಲಿ ಮಾತ್ರಂಡ ತಂಡವು 5–3 ಅಂತರದಿಂದ ಜಯ ದಾಖಲಿಸಿತು.

ಚೇಂದೀರ ಚೇತನ್ ಅವರು ಕೇವಲ 2 ನಿಮಿಷಗಳ ಅಂತರದಲ್ಲಿ ಗಳಿಸಿದ ಸತತ 2 ಗೋಲುಗಳ ನೆರವಿನಿಂದ ಚೇಂದೀರ ತಂಡವು ಮಾದಂಡ ತಂಡದ ವಿರುದ್ಧ 4–0 ಅಂತರದಿಂದ ಗೆದ್ದಿತು.

ADVERTISEMENT

ಸಣ್ಣುವಂಡ ತಂಡವು 3-0ಯಿಂದ ಐಚಂಡ ವಿರುದ್ಧ; ಕನ್ನಂಡ ತಂಡವು 2-1ರಿಂದ ಕುಟ್ಟಂಡ ವಿರುದ್ಧ; ಕೊಳ್ಳಿರ ತಂಡವು 1-0ಯಿಂದ ಮುಂಡಚಾಡಿರ ವಿರುದ್ಧ; ನಂಬುಡಮಾಡ ತಂಡವು 3-1ರಿಂದ ತೀತಿಮಾಡ ವಿರುದ್ಧ; ಕಡೇಮಾಡ ತಂಡವು 2-0ಯಿಂದ ಪಳಂಗಂಡ ವಿರುದ್ಧ; ನಾಪಂಡ ತಂಡವು 3-0ಯಿಂದ ಮನೆಯಪಂಡ ವಿರುದ್ಧ ಗೆಲುವು ಸಾಧಿಸಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.