ADVERTISEMENT

ಮಡಿಕೇರಿ| ಕಾಲಘಟ್ಟದ ಪ್ರಭಾವವೇ ಇತಿಹಾಸ: ಲೇಖಕಿ ಸರಿತಾ ಮಂದಣ್ಣ

​ಪ್ರಜಾವಾಣಿ ವಾರ್ತೆ
Published 15 ಜನವರಿ 2026, 3:55 IST
Last Updated 15 ಜನವರಿ 2026, 3:55 IST
ಲೇಖಕಿ ಸರಿತಾ ಮಂದಣ್ಣ ಕೊಡಗು ವಿದ್ಯಾಲಯದ ವಿದ್ಯಾರ್ಥಿಗಳೊಂದಿಗೆ ಈಚೆಗೆ ಸಂವಾದ ನಡೆಸಿದರು
ಲೇಖಕಿ ಸರಿತಾ ಮಂದಣ್ಣ ಕೊಡಗು ವಿದ್ಯಾಲಯದ ವಿದ್ಯಾರ್ಥಿಗಳೊಂದಿಗೆ ಈಚೆಗೆ ಸಂವಾದ ನಡೆಸಿದರು   

ಮಡಿಕೇರಿ: ಇಂದಿನ ಮಕ್ಕಳು ಹೆಚ್ಚಿನ ಆಸಕ್ತಿಯಿಂದ ಅಧ್ಯಯನ ಮಾಡಿದರೆ, ಭವಿಷ್ಯದಲ್ಲಿ ಪ್ರತಿಯೊಬ್ಬರೂ ಹೊಸ ಇತಿಹಾಸವನ್ನು ದಾಖಲಿಸಲು ಸಾಧ್ಯವಿದೆ ಎಂದು ಲೇಖಕಿ ಸರಿತಾ ಮಂದಣ್ಣ ಹೇಳಿದರು.

ಅವರು ಈಚೆಗೆ ಇಲ್ಲಿನ ಕೊಡಗು ವಿದ್ಯಾಲಯದ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಮಾತನಾಡಿದರು.

ಇತಿಹಾಸ ಎಂದರೆ ಕೇವಲ ವರ್ಷಗಳು ಮತ್ತು ದಿನಾಂಕಗಳು ಮಾತ್ರವಲ್ಲ. ಆಗಿನ ಕಾಲಘಟ್ಟವನ್ನು ಮನಗಂಡು ಅದರ ಪ್ರಭಾವವನ್ನು ಅರಿಯುವುದೇ ನಿಜವಾದ ಇತಿಹಾಸ ಅಧ್ಯಯನ ಎಂದು ಪ್ರತಿಪಾದಿಸಿದರು.

ADVERTISEMENT

ಇತಿಹಾಸವನ್ನು ತಿಳಿದುಕೊಂಡು ಅದನ್ನು ಸರಳವಾಗಿ ಕಥೆಯ ರೂಪದಲ್ಲಿ ಹೇಗೆ ಬರೆಯಬೇಕು ಎಂಬ ಕುರಿತು ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗಳಿಗೆ ಅವರು ಉತ್ತರಿಸಿದರು.

ಕೊಡಗು ವಿದ್ಯಾಲಯದ ಆಡಳಿತ ಮಂಡಳಿ ನಿರ್ದೇಶಕಿ ನಿಯತಾ ದೇವಯ್ಯ ಸೋಮಣ್ಣ, ಪ್ರಾಂಶುಪಾಲರಾದ ಕೆ.ಎಸ್.ಸುಮಿತ್ರಾ, ಆಡಳಿತಾಧಿಕಾರಿ ಪಿ.ರವಿ ಹಾಗೂ ಶಿಕ್ಷಕ ವೃಂದದವರು ಭಾಗವಹಿಸಿದ್ದರು ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.