ಸಾಂದರ್ಭಿಕ ಚಿತ್ರ
ವಿರಾಜಪೇಟೆ: ಇಲ್ಲಿಗೆ ಸಮೀಪದ ಬೇಟೋಳಿ ಗ್ರಾಮದ ಮಾಜಿ ಗ್ರಾಮಪಂಚಾಯಿತಿ ಸದಸ್ಯೆ ಶಿಲ್ಪ(36)ಎಂಬುವರನ್ನು ಶನಿವಾರ ಆಕೆಯ ಪತಿ ಗುಂಡಿಕ್ಕಿ ಕೊಂದು ಬಳಿಕ ಪೊಲೀಸರಿಗೆ ಶರಣಾಗಿದ್ದಾನೆ.
ಕಾಫಿ ಬೆಳೆಗಾರ ಎನ್.ಬೋಪಣ್ಣ ಶರಣಾದ ವ್ಯಕ್ತಿ. ವಿರಾಜಪೇಟೆ ನಗರ ಪೊಲೀಸ್ ಠಾಣೆಗೆ ಕೋವಿ ಸಹಿತ ಬಂದು ವ್ಯಕ್ತಿಯನ್ನು ಬಂಧಿಸಿ ಆಯುಧ ಜಫ್ತಿ ಮಾಡಿದ್ದಾರೆ. ದಂಪತಿಗೆ ಇಬ್ಬರು ಪುತ್ರಿಯರಿದ್ದು, ವಿದ್ಯಾಭ್ಯಾಸ ಮಾಡುತ್ತಿದ್ದಾರೆ.
ಬೆಂಗಳೂರಿನಿಂದ ಬ್ಯಾಲಸ್ಟಿಕ್ ತಜ್ಞರು ಆಗಮಿಸಿ ಮಾಹಿತಿ ಕಲೆಹಾಕಿ, ಸ್ಥಳ ಮಹಜರು ನಡೆಸಿದ ಬಳಿಕ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ. ವಿರಾಜಪೇಟೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಮುಂದಿನ ಕ್ರಮಕೈಗೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.