ಕುಶಾಲನಗರ: ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಕೊಡಗು ಜಿಲ್ಲಾ ಘಟಕದ ವತಿಯಿಂದ ಅಂಚೆ ಕಾರ್ಡ್‌ನಲ್ಲಿ ವಚನಗಳನ್ನು ಬರೆಯುವ ಸ್ಪರ್ಧೆ ಆಯೋಜಿಸಲಾಗಿದೆ.
12ನೇ ಶತಮಾನದ ಬಸವಾದಿ ಶರಣ- ಶರಣೆಯರು ಬರೆದ ವಚನಗಳನ್ನು ಅಂಚೆ ಕಾರ್ಡಿನಲ್ಲಿ ಬರೆದು ಕೆಳಕಂಡ ವಿಳಾಸಕ್ಕೆ ಜುಲೈ 20ರ ಒಳಗೆ ಕಳುಹಿಸಬೇಕು. ಕಳಿಸುವವರ ವಿಳಾಸ ಹಾಗೂ ಮೊಬೈಲ್ ನಂಬರ್ ನಮೂದಿಸಬೇಕು.
ಶಾಲಾ–ಕಾಲೇಜುಗಳ ವಿದ್ಯಾರ್ಥಿಗಳು, ಸಾರ್ವಜನಿಕರು, ಮಹಿಳೆಯರು ಎಲ್ಲರಿಗೂ ಸ್ಪರ್ಧೆಗೆ ಮುಕ್ತ ಅವಕಾಶ ಇದೆ. ಅತಿ ಹೆಚ್ಚು ವಚನಗಳನ್ನು ಬರೆದು ಕಳಿಸಿದವರಿಗೆ ಬಹುಮಾನ ನೀಡಲಾಗುವುದು ಎಂದು ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಬಿ.ನಟರಾಜು ತಿಳಿಸಿದ್ದಾರೆ.
ವಿಳಾಸ: ಕೆ.ಎಸ್.ಮೂರ್ತಿ, ಜಿಲ್ಲಾ ಅಧ್ಯಕ್ಷರು ಶರಣ ಸಾಹಿತ್ಯ ಪರಿಷತ್ತು, ಶ್ರೀ ಅನ್ನಪೂರ್ಣೇಶ್ವರಿ ನಿವಾಸ, ಸೋಮೇಶ್ವರ ದೇವಾಲಯದ ಬಳಿ, ಕುಶಾಲನಗರ, ಕೊಡಗು ಜಿಲ್ಲೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.