ADVERTISEMENT

ಕುಶಾಲನಗರ: ಜಿಲ್ಲಾ ಜೆಡಿಎಸ್ ಹಂಗಾಮಿ ಅಧ್ಯಕ್ಷರಾಗಿ ಕಾರ್ಮಾಡು ಸುಬ್ಬಣ್ಣ ಆಯ್ಕೆ

​ಪ್ರಜಾವಾಣಿ ವಾರ್ತೆ
Published 7 ಜನವರಿ 2026, 5:12 IST
Last Updated 7 ಜನವರಿ 2026, 5:12 IST
ಕುಶಾಲನಗರದಲ್ಲಿ ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಕೋಟಿ ರಾಮಣ್ಣ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಹಂಗಾಮಿ ಅಧ್ಯಕ್ಷರಾಗಿ ಕಾರ್ಮಾಡು ಸುಬ್ಬಣ್ಣ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು
ಕುಶಾಲನಗರದಲ್ಲಿ ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಕೋಟಿ ರಾಮಣ್ಣ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಹಂಗಾಮಿ ಅಧ್ಯಕ್ಷರಾಗಿ ಕಾರ್ಮಾಡು ಸುಬ್ಬಣ್ಣ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು   

ಕುಶಾಲನಗರ: ಕೊಡಗು ಜಿಲ್ಲೆಯ ಜಾತ್ಯಾತೀತ ಜನತಾ ದಳದ ಹಂಗಾಮಿ ಜಿಲ್ಲಾ ಅಧ್ಯಕ್ಷರಾಗಿ ಕಾರ್ಮಾಡು ಸುಬ್ಬಣ್ಣ ಅವರನ್ನು ಅವಿರೋಧವಾಗಿ ಆಯ್ಕೆಯಾದರು.

ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಕೋಟಿ ರಾಮಣ್ಣ ಅಧ್ಯಕ್ಷತೆಯಲ್ಲಿ ಇಲ್ಲಿನ ಟಾಪ್ ಇನ್ ಟೌನ್ ಹೋಟೆಲ್ ಸಭಾಂಗಣದಲ್ಲಿ ನಡೆದ ಪಕ್ಷದ ಸಭೆಯಲ್ಲಿ ನೇಮಕ ಮಾಡಲಾಯಿತು.

ಪಕ್ಷದ ಮುಖಂಡ ಕೋತೂರು ಸುರೇಶ್ ಮಾತನಾಡಿ, ಜಿಲ್ಲೆಯಲ್ಲಿ ಜೆಡಿಎಸ್ ಸುಭದ್ರವಾಗಿದ್ದು, ನಾಯಕರಿಲ್ಲದೇ ಪಕ್ಷದ ಕಾರ್ಯಕರ್ತರು ಉತ್ಸಾಹ ಕಳೆದುಕೊಂಡಿದ್ದರು. ಈಗ ಸುಬ್ಬಣ್ಣ ಅವರ ಆಯ್ಕೆಯಿಂದಾಗಿ ಬಲ ಬಂದಿದೆ ಎಂದರು.

ADVERTISEMENT

ವಕೀಲ ಮನೋಜ್ ಬೋಪಯ್ಯ, ಜಿಲ್ಲೆಯಲ್ಲಿ ಜೆಡಿಎಸ್‌ನ್ನು ಮೂಲದಿಂದ ಬಲಪಡಿಸಲು ಕಾರ್ಯಕರ್ತರು ಶ್ರಮಿಸಬೇಕಿದೆ ಎಂದು ತಿಳಿಸಿದರು.

ಪಕ್ಷದ ಕಾರ್ಯಕರ್ತರು, ಮುಖಂಡರು ಹೈಕಮಾಂಡ್ ನೀಡುವ ಸಲಹೆ ಹಾಗೂ ನಿರ್ದೇಶನ ಪಾಲಿಸುವಂತೆ ಸಭೆ ತೀರ್ಮಾನಿಸಲಾಯಿತು.

ಪ್ರಮುಖರಾದ ಕೋತೂರು ಸುರೇಶ್, ಬೀಟಿಕಟ್ಟೆ ಎಚ್.ಡಿ.ಪ್ರವೀಣ್, ಸೋಮವಾರಪೇಟೆ ನಾಗರಾಜು, ವಕೀಲರಾದ ಮನೋಜ್ ಬೋಪಯ್ಯ, ಕಾಟ್ನಮನೆ ವಿಠಲಗೌಡ, ಸುಂಟಿಕೊಪ್ಪದ ಎಂ.ಎಂ.ಷರೀಫ್, ಸಭೆಯ ಆಯೋಜಕ ಕುಶಾಲನಗರದ ಎಚ್.ಟಿ.ವಸಂತ, ಡಿ.ಪಿ.ಗಿರೀಶ್, ಸಂತೋಷ್, ವೆಂಕಟೇಶ್, ಕೆ.ಸಿ.ರಘು, ಶ್ರೀನಿವಾಸ್, ಕೂಡಿಗೆಯ ರಾಜು, ರಾಮಚಂದ್ರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.