ADVERTISEMENT

168 ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ ಆನಂದಪುರದ ಐತಿಹಾಸಿಕ ಕಾಂತಿ ಚರ್ಚ್

ಸಿದ್ದಾಪುರ: ಮೊಂಗ್ಲಿಂಗ್, ಕಿಟ್ಟೆಲ್ ಸಾಧನೆಯ ತಾಣ

ರೆಜಿತ್‌ಕುಮಾರ್ ಗುಹ್ಯ
Published 25 ಡಿಸೆಂಬರ್ 2025, 6:08 IST
Last Updated 25 ಡಿಸೆಂಬರ್ 2025, 6:08 IST
ಆನಂದಪುರದ ಕಾಂತಿ ಚರ್ಚ್
ಆನಂದಪುರದ ಕಾಂತಿ ಚರ್ಚ್   
ಆಳವಾದ ಇತಿಹಾಸ ಹೊಂದಿರುವ ಚರ್ಚ್‌ | ಕನ್ನಡದ ಕಾಯಕ ಮಾಡಿದವರಿದ್ದ ‍‌ಪ್ರಾರ್ಥನಾ ಮಂದಿರ |ಹಲವು ಕೌತುಕ ಸಂಗತಿಗಳ ತಾಣ

ಸಿದ್ದಾಪುರ: ಮೊಂಗ್ಲಿಂಗ್, ಕಿಟ್ಟೆಲ್ ಸಾಧನೆಯ ತಾಣ ಆನಂದಪುರದ ಐತಿಹಾಸಿಕ ಕಾಂತಿ ಚರ್ಚ್.

ಸಿದ್ದಾಪುರ ಸಮೀಪದ ಆನಂದಪುರದ ಸುಮಾರು 168 ವರ್ಷಗಳ ಐತಿಹಾಸ ಇರುವ ಕಾಂತಿ ಚರ್ಚ್ ಕನ್ನಡದ ಮೊದಲ ಪತ್ರಿಕೆ ‘ಮಂಗಳೂರು ಸಮಾಚಾರ’ವನ್ನು ಹೊರತಂದ ಹರ್ಮನ್ ಮೋಗ್ಲಿಂಗ್ ಹಾಗೂ ಕನ್ನಡ ನಿಘಂಟು ತಜ್ಞ ಕಿಟ್ಟೆಲ್ ಅವರು ಇದ್ದಂತಹ ಐತಿಹಾಸಿಕ ತಾಣ.

ಸಿದ್ದಾಪುರ ಸಮೀಪದ ಈಗಿನ ಆನಂದಪುರದ ನಿವಾಸಿ ಆನಂದರಾವ್ ಕೌಂಡಿನ್ಯ ಎಂಬುವವರು ಮೊಂಗ್ಲಿಂಗ್ ಅವರ ಭಾಷಣದಿಂದ ಪ್ರಭಾವಿತರಾಗಿ 1857 ರಲ್ಲಿ ಅವರನ್ನು ಕೊಡಗಿಗೆ ಕರೆತಂದರು. ಆನಂದರಾವ್ ಅವರಿಗೆ ಸೇರಿದ 70 ಎಕರೆ ಜಾಗದಲ್ಲಿ ಚರ್ಚ್ ಒಂದನ್ನು ನಿರ್ಮಿಸಲು ಅನುವು ಮಾಡಿದ್ದು, ಆಲಮಂಡ ಕುಟುಂಬಸ್ಥರು ಸಹಕಾರ ನೀಡಿದ ಕಾರಣ ಚರ್ಚ್‌ಗೆ ಆಲಮಂಡ ಚರ್ಚ್ ಎಂಬ ಹೆಸರು ನೀಡಲಾಗಿತ್ತು.

ADVERTISEMENT

ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡ ಆನಂದರಾವ್ ಕೌಂಡಿನ್ಯ, ಬಳಿಕ ಕ್ರೈಸ್ತ ಧರ್ಮಗುರುಗಳಾದರು. ಆನಂದರಾವ್ ಅವರು ತಮ್ಮ ಜಾಗವನ್ನು ಬಾಸಿಲ್ ಮಿಷಿನ್ ಅಡಿಯಲ್ಲಿದ್ದ ಈ ಚರ್ಚ್‌ಗೆ ನೀಡಿದ್ದು, ಅವರ ಹೆಸರನ್ನೇ ಆನಂದಪುರ ಎಂದು ಗ್ರಾಮಕ್ಕೆ ನೀಡಲಾಯಿತು. ಗ್ರಾಮದ ಇತರರನ್ನು ಕ್ರೈಸ್ತ ಧರ್ಮಕ್ಕೆ ಸೇರಿಸಿ, ಎಲ್ಲರಿಗೂ ಉಚಿತ ವಿದ್ಯಾಭ್ಯಾಸ ನೀಡಲಾಗುತ್ತಿತ್ತು. ಬಳಿಕ ಆನಂದರಾವ್ ಜರ್ಮನಿಗೆ ತೆರಳಿದರು. ಸ್ವಾತಂತ್ರ್ಯ ಪೂರ್ವದಲ್ಲೇ ಆನಂದಪುರದಲ್ಲಿ ವಸತಿ ನಿಲಯವನ್ನು ಸ್ಥಾಪಿಸಿ, ಬಡ ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ನೀಡಲಾಗುತ್ತಿದ್ದು, ಆಗಿನ ವಸತಿ ನಿಲಯ 2015ರಲ್ಲಿ ಮುಚ್ಚಿತು.

ಮೊಂಗ್ಲಿಂಗ್ ಅವರು ಆನಂದಪುರ, ಮಡಿಕೇರಿ ಹಾಗೂ ಪಾಲಿಬೆಟ್ಟದಲ್ಲಿ ಧರ್ಮ ಪ್ರಚಾರ ಮಾಡುತ್ತಿದ್ದರೆ, ಕಿಟ್ಟೆಲ್ ಅವರು ಆನಂದಪುರದಲ್ಲೇ ತಂಗಿದ್ದರು. ಧರ್ಮ ಪ್ರಚಾರಕ್ಕಿಂತ ನಿಘಂಟು ರಚಿಸುವ ಕೆಲಸದಲ್ಲೇ ಕಿಟ್ಟೆಲ್ ಮಗ್ನರಾಗಿದ್ದರು. ಭಾನುವಾರ ಪ್ರಾರ್ಥನೆ ವೇಳೆ ಕಿಟ್ಟೆಲ್ ಧಾರ್ಮಿಕ ಭಾಷಣ ಮಾಡುತ್ತಿದ್ದರು. ಮೊಂಗ್ಲಿಂಗ್ ಹಾಗೂ ಕಿಟ್ಟೆಲ್ ತಂಗಿದ್ದ ವಸತಿ ಗೃಹಗಳು ಈಗಲೂ ಇವೆ. ಆರಂಭದಲ್ಲಿ ಹುಲ್ಲಿನ ಹೊದಿಕೆಯ ಚರ್ಚ್ ಇದ್ದು, 2014ರಲ್ಲಿ ಚರ್ಚ್ ಅನ್ನು ನವೀಕರಿಸಲಾಗಿದೆ. ಬಳಿಕ ಚರ್ಚ್‌ಗೆ ಕಾಂತಿ ಚರ್ಚ್ ಎಂದು ಮರು ನಾಮಕರಣ ಮಾಡಲಾಗಿದೆ.

ಪ್ರಸ್ತುತ ಸುಮಾರು 104 ಕುಟುಂಬಗಳು ಚರ್ಚ್ ಅಡಿಯಲ್ಲಿದ್ದು, ಕ್ರಿಸ್ಮಸ್ ಅನ್ನು ಸಡಗರದಿಂದ ಆಚರಿಸುತ್ತಿದ್ದಾರೆ.

ಅರವಿಂದ್ ಜೆರಾಲ್ಡ್
ಹರ್ಮನ್ ಮೊಂಗ್ಲಿಂಗ್ ಸ್ಥಾಪಿಸಿದ ಆನಂದಪುರದ ಚರ್ಚ್
ಆನಂದಪುರದ ಬಾಸಿಲ್ ಮಿಷಿನ್ ಧಾರ್ಮಿಕ ಕೇಂದ್ರ
ರೆ. ದಿಲನ್ ಚಕ್ರವರ್ತಿ ಧರ್ಮ ಗುರುಗಳು ಕಾಂತಿ ಚರ್ಚ್ ಆನಂದಪುರ
70 ಏಕರೆ ಜಾಗವನ್ನು ಆನಂದರಾವ್ ಕೌಂಡಿನ್ಯ ಅವರು ಚರ್ಚ್‌ಗೆ ನೀಡಿದ್ದರು. ಅವರ ನಿಧನದ ಬಳಿಕ ಈ ಜಾಗಕ್ಕೆ ಆನಂದಪುರ ಎಂಬ ಹೆಸರು ಬಂದಿದೆ. ಅಂದಿನ ಕಾಲದ ಮಕ್ಕಳ ವಸತಿ ಗೃಹ ಈಗಲೂ ಇದೆ
ಅರವಿಂದ್ ಜೆರಾಲ್ಡ್ ಸ್ಥಳೀಯ ನಿವಾಸಿ
168 ವರ್ಷಗಳ ಇತಿಹಾಸವಿರುವ ಚರ್ಚ್ ಅನ್ನು 2014ರಲ್ಲಿ ನವೀಕರಿಸಿ ಕಾಂತಿ ಚರ್ಚ್ ಎಂದು ಮರುನಾಮಕರಣ ಮಾಡಲಾಗಿದೆ. ಕ್ರಿಸ್ಮಸ್ ದಿನದಂದು ವಿಶೇಷ ಪ್ರಾರ್ಥನೆ ನಡೆಯಲಿದೆ
ದಿಲನ್ ಚಕ್ರವರ್ತಿ ಕಾಂತಿ ಚರ್ಚ್ ಧರ್ಮ ಗುರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.