ADVERTISEMENT

ನಾಪೋಕ್ಲು: ಕಾವೇರಿ ತೀರ್ಥ ವಿತರಣೆ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2025, 6:10 IST
Last Updated 21 ಅಕ್ಟೋಬರ್ 2025, 6:10 IST
ಮೈಸೂರಿನ ಕೊಡಗು ಗೌಡ ಸಮಾಜದಿಂದ ಕಾವೇರಿ ತೀರ್ಥವನ್ನು ವಿತರಿಸಲಾಯಿತು
ಮೈಸೂರಿನ ಕೊಡಗು ಗೌಡ ಸಮಾಜದಿಂದ ಕಾವೇರಿ ತೀರ್ಥವನ್ನು ವಿತರಿಸಲಾಯಿತು   

ನಾಪೋಕ್ಲು: ಮೈಸೂರಿನ ಕೊಡಗು ಗೌಡ ಸಮಾಜದಿಂದ ಸಮುದಾಯದ ಬಂಧುಗಳಿಗೆ ಹಾಗೂ ಭಕ್ತರಿಗೆ ಕಾವೇರಿ ತೀರ್ಥವನ್ನು ಶ್ರದ್ಧಾಭಕ್ತಿಯಿಂದ ವಿತರಿಸಲಾಯಿತು.

ಮೈಸೂರಿನ ಕೊಡಗು ಗೌಡ ಸಮುದಾಯ ಭವನದ ದೇವರ ಮಂಟಪದಲ್ಲಿ ತೀರ್ಥ ಪೂಜೆಯನ್ನು ನೆರವೇರಿಸಿದ ನಂತರ, ನೆರೆದ ಭಕ್ತರಿಗೆ ತೀರ್ಥ ವಿತರಣೆ ಮಾಡಲಾಯಿತು.

ಮೈಸೂರು ಕೊಡಗು ಗೌಡ ಸಮಾಜದ ಪದಾಧಿಕಾರಿಗಳಾದ ಪೊನ್ನೆಟಿ ನಂದ, ನಡುವಟ್ಟಿರ ಲಕ್ಷ್ಮಣ, ನಡುಮನೆ ಚೆಂಗಪ್ಪ, ನಿರ್ದೇಶಕರಾದ ಪಟ್ಟಡ ಶಿವಕುಮಾರ್, ಹೊಸೂರು ರಾಘವ, ಕುಂಟುಪುಣಿ ರಮೇಶ್, ಪಾಣತ್ತಲೆ ವಸಂತ, ಚಪ್ಪೆರ ಯಮುನಾ, ಕುಂಟುಪುಣಿ ಶೀಲಾ, ತೊಟಂಬೈಲು ಇಂದಿರಾ, ಮೈಸೂರು ಕೊಡಗು ಗೌಡ ಸಮಾಜದ ಮಾಜಿ ಅಧ್ಯಕ್ಷ ತೊಟಂಬೈಲು ಮನೋಹರ, ಕುದುಪಜೆ ಕುಶಾಲಪ್ಪ, ಕೊಡಗು ಮತ್ತು ದಕ್ಷಿಣ ಕನ್ನಡ ಮಹಿಳಾ ಒಕ್ಕೂಟದ ಅಧ್ಯಕ್ಷೆ ನಡುವಟ್ಟಿರ ಗೀತಾ ಲಕ್ಷ್ಮಣ ಉಪಸ್ಥಿತರಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.