ಸಾಂಕೇತಿಕ ಚಿತ್ರ
ನಾಪೋಕ್ಲು: ಕಕ್ಕಬ್ಬೆ-ಮರಂದೋಡ ಗ್ರಾಮ ವ್ಯಾಪ್ತಿಗಳಲ್ಲಿ ಕಾಡಾನೆಗಳ ಉಪಟಳ ಹೆಚ್ಚಿದ್ದು ರೈತರು ಸಂಕಷ್ಟಕ್ಕೀಡಾಗಿದ್ದಾರೆ.
ಮಂಗಳವಾರ ರಾತ್ರಿ ಗ್ರಾಮದ ಚಂಡೀರ ಮುದ್ದಪ್ಪ ಮತ್ತು ಈರಪ್ಪ ಅವರ ಗದ್ದೆಗಳಿಗೆ ದಾಳಿ ಮಾಡಿರುವ ಕಾಡಾನೆಗಳು ಸಸಿಮಡಿಗಳನ್ನು ತುಳಿದು ನಾಶಮಾಡಿವೆ. ‘ಭತ್ತದ ಕೃಷಿಯನ್ನು ಕೈಗೊಳ್ಳುವುದೇ ದುಸ್ತರವಾಗಿದೆ. ನಾಟಿಗೆಂದು ಬಿತ್ತನೆ ಮಾಡಿದ್ದ ಸಸಿಮಡಿಗಳು ಸಿದ್ಧವಾಗುವ ವೇಳೆಗೆ ಆನೆಗಳು ತುಳಿದು ಹಾನಿಮಾಡಿವೆ. ಅರಣ್ಯ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿ ಸೂಕ್ತ ಪರಿಹಾರ ನೀಡಬೇಕು. ಕಾಡಾನೆಗಳಿಂದ ರಕ್ಷಣೆಯೂ ಬೇಕಿದೆ ಎಂದು ಚಂಡೀರ ಮುದ್ದಪ್ಪ ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.