ಮಡಿಕೇರಿ: ಕೊಡಗು ಜಿಲ್ಲೆಯ ಒಳಗೆ ಬೆಳಿಗ್ಗೆಯಿಂದ 9 ಗಂಟೆಯವರೆಗೆ ಸಂಚರಿಸಬೇಕಿದ್ದ ಎಲ್ಲ 42 ಕೆಎಸ್‌ಆರ್‌ಟಿಸಿ ಬಸ್‌ಗಳೂ ಸಂಚಾರ ನಡೆಸಿವೆ. ಜಿಲ್ಲೆಯ ಒಳಗೆ ಕೆಎಸ್‌ಆರ್‌ಟಿಸಿ ನೌಕರರ ಮುಷ್ಕರದ ಬಿಸಿ ತಟ್ಟಿಲ್ಲ.
ಆದರೆ, ಹಾಸನ ಮತ್ತು ಮೈಸೂರು ಭಾಗಕ್ಕೆ ತೆರಳಬೇಕಾದ ಬಸ್‌ಗಳು ಸಂಚರಿಸಲಾಗದೆ ಕುಶಾಲನಗರದಲ್ಲೆ ನಿಂತಿವೆ. ಇದರಿಂದ ಹೊರ ಜಿಲ್ಲೆಗೆ ಹೋಗಬೇಕಾದ ಪ್ರಯಾಣಿಕರು ಪರದಾಡುವಂತಾಗಿದೆ.
ಈ ಕುರಿತು ಪ್ರಜಾವಾಣಿಗೆ ಪ್ರತಿಕ್ರಿಯೆ ನೀಡಿದ ಮಡಿಕೇರಿ ಬಸ್ ಡಿಪೊ ಮೇಲ್ವಿಚಾರಕ ಇರ್ಸಪ್ಪ, 'ಕೊಡಗು ಜಿಲ್ಲೆಯ ಒಳಗೆ ಹಾಗೂ ಮಂಗಳೂರು ಭಾಗಕ್ಕೆ ಬಸ್ ಸಂಚಾರದಲ್ಲಿ ಯಾವುದೆ ವ್ಯತ್ಯಯ ಆಗಿಲ್ಲ’ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಖಾಸಗಿ ಬಸ್‌ಗಳೂ ಹೆಚ್ಚಿನ ಸಂಖ್ಯೆಯಲ್ಲಿ ಸಂಚರಿಸುತ್ತಿರುವುದರಿಂದ ಜಿಲ್ಲೆಯ ಒಳಗೆ ಸಂಚಾರಕ್ಕೆ ಹೆಚ್ಚಿನ ಸಮಸ್ಯೆ ಆಗಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.