ADVERTISEMENT

ಕೊಡಗು ಅಂಚೆ ವಿಭಾಗದ ಕಚೇರಿಯ ಪಿನ್‍ಕೋಡ್ ಬದಲಾವಣೆ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2026, 7:16 IST
Last Updated 28 ಫೆಬ್ರುವರಿ 2026, 7:16 IST
   

ಮಡಿಕೇರಿ: ಅಂಚೆ ಇಲಾಖೆಯ ಆಡಳಿತಾತ್ಮಕ ಸುಧಾರಣೆ ಹಾಗೂ ಟಪಾಲು ವಿತರಣಾ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ನಿರ್ವಹಿಸುವ ದೃಷ್ಠಿಯಿಂದ ಕೊಡಗು ಅಂಚೆ ವಿಭಾಗದ ಕಚೇರಿಯ ಪಿನ್‍ಕೋಡ್ ಅನ್ನು ಬದಲಾವಣೆ ಮಾಡಲಾಗಿದೆ.

ಮಡಿಕೇರಿ ಪ್ರಧಾನ ಅಂಚೆ ಕಚೇರಿ 571201-ಮಡಿಕೇರಿ ವ್ಯಾಪ್ತಿಗೆ ಬರುವ ಪ್ರದೇಶಗಳು, ವಿದ್ಯಾನಗರ ಉಪ ಅಂಚೆ ಕಚೇರಿ-571202 ಗಾಳಿಬೀಡು ಶಾಖಾ ಕಚೇರಿ, ಕಾಲೂರು ಶಾಖಾ ಕಚೇರಿ, ಕೆ.ನಿಡುಗಣೆ ಶಾಖಾ ಕಚೇರಿ, ಮಡಿಕೇರಿ ಡಿ.ಒ.ಸಿ ಉಪ ಅಂಚೆ ಕಚೇರಿ- 571203 ಅರುವತೊಕ್ಲು ಶಾಖಾ ಕಚೇರಿ (ಮಡಿಕೇರಿ), ಅವಂದೂರು ಶಾಖಾ ಕಚೇರಿ, ಬೆಟ್ಟಗೇರಿ ಶಾಖಾ ಕಚೇರಿ, ಬಿಳಿಗೇರಿ ಶಾಖಾ ಕಚೇರಿ, ಬೋಯಿಕೇರಿ ಶಾಖಾ ಕಚೇರಿ, ಚೇರಾಂಬಾಣೆ ಶಾಖಾ ಕಚೇರಿ, ಹೆರವನಾಡು ಶಾಖಾ ಕಚೇರಿ, ಕಾಂಡನಕೊಲ್ಲಿ ಶಾಖಾ ಕಚೇರಿ, ಕಗ್ಗೋಡ್ಲು ಶಾಖಾ ಕಚೇರಿ, ಕೊಟ್ಟೂರು ಶಾಖಾ ಕಚೇರಿ, ಕೊಯ್ನಾಡ್ ಶಾಖಾ ಕಚೇರಿ, ಮದೇ ಶಾಖಾ ಕಚೇರಿ, ಮಕ್ಕಂದೂರು ಶಾಖಾ ಕಚೇರಿ, ತಾಳತ್ತಮನೆ ಶಾಖಾ ಕಚೇರಿಯ ಪಿನ್‍ಕೋಡ್ ಅನ್ನು ಬದಲಾವಣೆ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT