
ನಾಪೋಕ್ಲು: ಪಟ್ಟಣ ನೆಲಜಿ, ಬಲ್ಲಮಾವಟಿ, ಎಮ್ಮೆಮಾಡು,ಬೇತು ಗ್ರಾಮಗಳಲ್ಲಿ ಮಂಗಳವಾರ ಸಂಜೆ ಅಲ್ಪ ಪ್ರಮಾಣದ ಮಳೆ ಸುರಿಯಿತು.
ಗ್ರಾಮೀಣ ಭಾಗಗಳಲ್ಲಿ ಕಾಫಿ ಕೊಯ್ಲು ಬಿರುಸಿನಿಂದ ಸಾಗುತ್ತಿದ್ದು ಮಳೆಯಿಂದಾಗಿ ತೊಂದರೆ ಎದುರಾಯಿತು. ಹಲವೆಡೆ ಕಣದಲ್ಲಿ ಒಣಗಲು ಹಾಕಿದ್ದ ಕಾಫಿ ಒದ್ದೆಯಾಯಿತು. ಕಾಫಿಯನ್ನು ಟಾರ್ಪಲಿನ್ ಬಳಸಿ ಮುಚ್ಚಲು ಪರದಾಡಿದರು.
ಬೇತು ಗ್ರಾಮದ ಹನೀಫ್ ಮಾತನಾಡಿ, ‘ಹದಿನೈದು ದಿನಗಳ ಹಿಂದೆ ನಾಪೋಕ್ಲು ವ್ಯಾಪ್ತಿಯಲ್ಲಿ ಮಳೆಯಾಗಿತ್ತು. ಕಾಫಿಯ ತೋಟದಲ್ಲಿ ಅಲ್ಪ ಪ್ರಮಾಣದಲ್ಲಿ ಹೂಗಳು ಅರಳಿದ ಸಮಸ್ಯೆಯಾಗಿತ್ತು. ಮತ್ತೆ ಮಳೆಯಾಗಿದ್ದು ಅಲ್ಪ ಪ್ರಮಾಣದಲ್ಲಿ ಹೂಗಳು ಅರಳಲಿವೆ. ಕೊಯ್ಲಿಗೆ, ಒಣಗಿಸಲು ತೊಡಕಾಗಿದೆ.
‘ಈಗ ಮಳೆ ಸಮಸ್ಯೆಗೆ ಕಾರಣವಾಗುತ್ತಿದೆ. ಫೆಬ್ರವರಿ ಅಂತ್ಯದಲ್ಲಿ ಉತ್ತಮವಾಗಿ ಮಳೆ ಸುರಿದರೆ ಅನುಕೂಲ’ ಎಂಬುದು ಬಹುತೇಕ ಬೆಳೆಗಾರರ ಅಭಿಪ್ರಾಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.