
ನಾಪೋಕ್ಲು: ಬಲ್ಲಮಾವಟಿ ಶ್ರೀ ಭಗವತಿ ದೇವಸ್ಥಾನದ ಗರ್ಭಗುಡಿ ಹಾಗೂ ಮುಖ ಮಂಟಪ ಪುನರ್ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದ್ದು ಗುರುವಾರ ಷಡಾಧಾರ ಪೂಜಾ ವಿಧಿ ವಿಧಾನಗಳು ಶ್ರದ್ಧಾ ಭಕ್ತಿಯಿಂದ ಸಂಪನ್ನಗೊಂಡವು.
ದೇವಸ್ಥಾನದ ಹೃದಯ ಭಾಗದ ಗರ್ಭಗುಡಿಯ ನಿರ್ಮಾಣಕ್ಕೆ ನೆಲ ಮಟ್ಟದಿಂದ 7.25 ಅಡಿ ನೆಲದ ಒಳಗಿನಿಂದ ಅಡಿಪಾಯ ಹಾಕಿದ್ದು ಷಡಾಧಾರ ಪೂಜೆ ಗುರುವಾರ ನಡೆಯಿತು. ಗರ್ಭಗುಡಿ ಹಾಗೂ ಮುಖ ಮಂಟಪ ಅಡಿಪಾಯಕ್ಕೆ ಉಪ್ಪು ಮಿಶ್ರಿತ ಮರಳು ತುಂಬಿಸುವ ಕಾರ್ಯವನ್ನು ಊರಿನವರು ನೆರವೇರಿಸಿದರು. ಪೂಜೆ ಅಂಗವಾಗಿ ಭಕ್ತರಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.
ದೇವಸ್ಥಾನದ ತಕ್ಕ ಮುಖ್ಯಸ್ಥರಾದ ಕೋಟೆರ ಸುಬ್ಬಯ್ಯ, ನೆರವoಡ ಭೀಮಯ್ಯ, ಅಧ್ಯಕ್ಷ ಕೋಟೆರ ಸುಬ್ಬಯ್ಯ, ಉಪಾಧ್ಯಕ್ಷ ಬೈರುಡ ಮಾಚಯ್ಯ, ಕಾರ್ಯಾಧ್ಯಕ್ಷ ಮತ್ತು ಖಜಾಂಚಿ ಬೊಟ್ಟೋಳಂಡ ತಿಮ್ಮಯ್ಯ, ಚಂಗೇಟಿರ ಅಪ್ಪಯ್ಯ, ಕಾರ್ಯದರ್ಶಿ ಕೋಟೆರ ಧನುಷ್ ಬೋಪಣ್ಣ, ಮಾಜಿ ಕಾರ್ಯದರ್ಶಿ ಅಪ್ಪಚೆಟ್ಟೊಳಂಡ ರಾಜಭೀಮಯ್ಯ, ತಕ್ಕ ಮುಖ್ಯಸ್ಥರು, ಸಮಿತಿ ಸದಸ್ಯರು ಹಾಗೂ ಭಕ್ತರು ಉಪಸ್ಥಿತರಿದ್ದರು.
ತಂತ್ರಿ ದಿವಾಕರ್ ಭಟ್, ಮುಖ್ಯ ಅರ್ಚಕ ಪುಟ್ಟ ಅವರ ಮುಂದಾಳತ್ವದಲ್ಲಿ ಪೂಜಾ ವಿಧಿ ವಿಧಾನಗಳು ನಡೆದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.