ADVERTISEMENT

ವಿರಾಜಪೇಟೆ: ಜಾತಿ ಸಮೀಕ್ಷೆಯಲ್ಲಿ 'ಕೊಡವ ಮುಸ್ಲಿಂ' ಎಂದು ಬರೆಸಲು ಕೆ.ಎಂ.ಎ ಮನವಿ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2025, 4:14 IST
Last Updated 16 ಸೆಪ್ಟೆಂಬರ್ 2025, 4:14 IST
<div class="paragraphs"><p>ಜಾತಿ ಸಮೀಕ್ಷೆ</p></div>

ಜಾತಿ ಸಮೀಕ್ಷೆ

   

ವಿರಾಜಪೇಟೆ: ಸೆ. 22ರಿಂದ ಆರಂಭಗೊಳ್ಳುವ ಈ ಸಮೀಕ್ಷೆಯಲ್ಲಿ ಕೊಡಗಿನ ಮೂಲ ನಿವಾಸಿಗರಾಗಿರುವ ಕೊಡವ ಮುಸ್ಲಿಮರು ಕಡ್ಡಾಯವಾಗಿ ಪಾಲ್ಗೊಳ್ಳಬೇಕು ಎಂದು ಕೊಡವ ಮುಸ್ಲಿಂ ಅಸೋಸಿಯೇಷನ್ ಅಧ್ಯಕ್ಷ ದುದ್ದಿಯಂಡ ಎಚ್. ಸೂಫಿ ಅವರು ಮನವಿ ಮಾಡಿದರು.

ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಮೀಕ್ಷೆಯಲ್ಲಿ ಅಗತ್ಯ ಮಾಹಿತಿ ಸೇರಿದಂತೆ ಜಾತಿಯ ಹೆಸರನ್ನು ನಮೂದಿಸಲು ಅವಕಾಶ ಕಲ್ಪಿಸಲಾಗಿದೆ. ಆದರಿಂದ ಕೊಡವ ಮುಸ್ಲಿಂ ಸಮುದಾಯದವರು ನಮೂನೆಯ ಕಾಲಂ ಸಂಖ್ಯೆ 8ರಲ್ಲಿರುವ 'ಧರ್ಮ' ಎಂಬ ಕಾಲಂನಲ್ಲಿ 'ಇಸ್ಲಾಂ' ಎಂದೂ, ಕಾಲಂ ಸಂಖ್ಯೆ 9ರಲ್ಲಿರುವ 'ಜಾತಿ' ಕಾಲಂನಲ್ಲಿ 'ಕೊಡವ ಮುಸ್ಲಿಂ' ಎಂದೇ ಬರೆಸಬೇಕು. ಕೊಡವ ಮುಸ್ಲಿಂ ಜಾತಿಗೆ ಉಪಜಾತಿಗಳ ಹಾಗೂ ಸಮನಾರ್ಥದ ಹೆಸರನ್ನು ಬಳಸುವ ಅಗತ್ಯವಿಲ್ಲ. ಈ ಕಾರಣದಿಂದ ನಮೂನೆಯ ಕಾಲಂ ಸಂಖ್ಯೆ 10ರಲ್ಲಿರುವ 'ಉಪಜಾತಿ' ಕಾಲಂನಲ್ಲಿ 'ಅನ್ವಯಿಸುವುದಿಲ್ಲ' ಎಂದು ನಮೂದಿಸಬೇಕು’ ಎಂದು ತಿಳಿಸಿದರು.

‘ಈಗಾಗಲೇ ಆಯೋಗ ಸಿದ್ದಪಡಿಸಿರುವ ಮಾತೃಭಾಷೆಗಳ ಪಟ್ಟಿಯಲ್ಲಿ ಕೊಡವ ಮುಸ್ಲಿಮರ ಮಾತೃಭಾಷೆಯಾದ 'ಪಯಕ' ಇರುವುದಿಲ್ಲ. ಆದರಿಂದ ಮಾತೃಭಾ ಕಾಲಂನಲ್ಲಿ ಸಂಕೇತ ಸಂಖ್ಯೆ14ರಲ್ಲಿರುವಂತೆ 'ಇತರೆ' ಎಂದು ನಮೂದಿಸಿ, ಆ ಭಾಗದಲ್ಲಿ ಸಮುದಾಯದ ಮಾತೃಭಾಷೆಯಾದ 'ಪಯಕ' ಎಂದು ಬರೆಯುವಂತೆ ಸಮೀಕ್ಷೆದಾರರಿಗೆ ಸ್ಪಷ್ಟವಾಗಿ ತಿಳಿಸಬೇಕು. ಇದಕ್ಕೆ
ಆಯೋಗ ಅನುವು ಮಾಡಿಕೊಡಿಕೊಟ್ಟಿದೆ’ ಎಂದರು.

ಕೆ.ಎಂ.ಎ. ಹಿರಿಯ ಉಪಾಧ್ಯಕ್ಷ ಡಾ. ಜೋಯಿಪೆರ ಎ. ಕುಂಜ್ಹಬ್ದುಲ್ಲಾ ಅವರು ಮಾತನಾಡಿದರು. ಗೋಷ್ಠಿಯಲ್ಲಿ ಕೆ.ಎಂ.ಎ. ಉಪಾಧ್ಯಕ್ಷ ಅಕ್ಕಳತಂಡ ಎಸ್. ಮೊಯ್ದು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.