ಮಡಿಕೇರಿ: ಕೊಡವ ಸಂಸ್ಕೃತಿ ಉಳಿವಿಗೆ ಒತ್ತಾಯಿಸಿ ಕೊಡವರು ನಡೆಸುತ್ತಿರುವ ಕೊಡವಾಮೆ ಬಾಳೋ ಪಾದಯಾತ್ರೆ ಶುಕ್ರವಾರ ನಗರ ತಲುಪಿತು.
ಸಾವಿರಾರು ಸಂಖ್ಯೆಯಲ್ಲಿ ಸೇರಿರುವ ಕೊಡವರು ನಗರದ ಪ್ರಮುಖ ರಸ್ತೆಗಳಲ್ಲಿ ಜಾಥಾ ನಡೆಸುತ್ತಿದ್ದಾರೆ.
ಕೊಡವ ಸಂಸ್ಕೃತಿ ಉಳಿವಿಗಾಗಿ ಒತ್ತಾಯಿಸಿ ಅಖಿಲ ಕೊಡವ ಸಮಾಜದ ನೇತೃತ್ವದಲ್ಲಿ ವಿವಿಧ ಕೊಡವ ಸಮಾಜಗಳು ಹಾಗೂ ಕೊಡವ ಭಾಷಿಕರು ಕುಟ್ಟದಿಂದ ಫೆ.2ರಂದು ಪಾದಯಾತ್ರೆ ಆರಂಭಿಸಿದ್ದರು. ಒಟ್ಟು 84 ಕ್ಕೂ ಅಧಿಕ ಕಿ.ಮೀ. ಕ್ರಮಿಸಿ ಶುಕ್ರವಾರ ಮಡಿಕೇರಿ ತಲುಪಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.