ADVERTISEMENT

ಕೊಂಡಂಗೇರಿ ವಿವಿಧೋದ್ದೇಶ ಸಹಕಾರ ದವಸ ಭಂಡಾರ: ಎ.ಎಂ.ಸಾದುಲಿ ಅಧ್ಯಕ್ಷ

​ಪ್ರಜಾವಾಣಿ ವಾರ್ತೆ
Published 30 ಜನವರಿ 2025, 13:40 IST
Last Updated 30 ಜನವರಿ 2025, 13:40 IST
ವಿರಾಜಪೇಟೆ ಸಮೀಪದ ಕೊಂಡಂಗೇರಿಯ ವಿವಿಧೋದ್ದೇಶ ಸಹಕಾರ ದವಸ ಭಂಡಾರ ನಿಯಮಿತದ 2025-30ನೇ ಸಾಲಿನ ಆಡಳಿತ ಮಂಡಳಿಯ ನೂತನ ಆಡಳಿತ ಮಂಡಳಿಗೆ ಆಯ್ಕೆಗೊಂಡ ನಿರ್ದೇಶಕರು
ವಿರಾಜಪೇಟೆ ಸಮೀಪದ ಕೊಂಡಂಗೇರಿಯ ವಿವಿಧೋದ್ದೇಶ ಸಹಕಾರ ದವಸ ಭಂಡಾರ ನಿಯಮಿತದ 2025-30ನೇ ಸಾಲಿನ ಆಡಳಿತ ಮಂಡಳಿಯ ನೂತನ ಆಡಳಿತ ಮಂಡಳಿಗೆ ಆಯ್ಕೆಗೊಂಡ ನಿರ್ದೇಶಕರು   

ವಿರಾಜಪೇಟೆ: ಸಮೀಪದ ಕೊಂಡಂಗೇರಿಯ ವಿವಿಧೋದ್ದೇಶ ಸಹಕಾರ ದವಸ ಭಂಡಾರ ನಿಯಮಿತದ 2025-30ನೇ ಸಾಲಿನ ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾಗಿ ಎ.ಎಂ.ಸಾದುಲಿ, ಉಪಾಧ್ಯಕ್ಷರಾಗಿ ಪುಡಿಯಂಡ ಇ.ಸಾದುಲಿ ಆಯ್ಕೆಯಾದರು.

ಕೊಂಡಂಗೇರಿ ಸಹಕಾರ ದವಸ ಭಂಡಾರದ ನೂತನ ಆಡಳಿತ ಮಂಡಳಿಗೆ ಒಟ್ಟು 11 ಜನ ಆಯ್ಕೆಗೊಂಡಿದ್ದರು. ಈ ಪೈಕಿ ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧಿಸಿದ್ದ ಟಿ.ಎ.ಆಲಿ, ಎನ್.ಈ.ಇಬ್ರಾಹಿಂ, ಜೆ.ಎಂ.ಇದರ, ಪುದಿಯಪೊರೆ ಹಸಿನಾರ್, ಮೇಕೇರಿರ ಪಿ.ರಾಧಾಪತಿ, ಜೆ.ಎ.ಸಾದುಲಿ, ಮಹಿಳಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಮೇಕೇರಿರ ಜಲಾಶ್ ರಾಧಾಪತಿ, ಮೇಕೇರಿರ ರಾಧಾ ತಮ್ಮಯ್ಯ ಮತ್ತು ಹಿಂದುಳಿದ ವರ್ಗದಿಂದ ಸ್ಪರ್ಧಿಸಿದ್ದ ಎಂ.ಎಂ.ಮಹಮ್ಮದ್ ನಿರ್ದೇಶಕರಾಗಿ ಚುನಾಯಿತರಾದರು.

ದವಸ ಭಂಡಾರದ ಆಡಳಿತ ಮಂಡಳಿಗೆ ಸ್ಪರ್ಧಿಸಿದ್ದ ಈ 11 ಜನರು ಸಹಕಾರ ಸಂಘಗಳ ನಿಯಮ 1960, 14(ಜಿ) ನಲ್ಲಿನ ಉಪಬಂಧಾನುಸಾರ ಕ್ರಮಬದ್ಧವಾಗಿ ಚುನಾಯಿತರಾಗಿದ್ದಾರೆ ಎಂದು ಚುನಾವಣಾ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದ ಹಾಲುಗುಂದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಉಜ್ಮಾ ಜಬೀನ್ ಅಧಿಕೃತವಾಗಿ ಘೋಷಿಸಿರುವುದಾಗಿ ಕೊಂಡಂಗೇರಿ ಸಹಕಾರ ದವಸ ಭಂಡಾರದ ಕಾರ್ಯದರ್ಶಿ ಮೈನಾ ಪೊನ್ನಣ್ಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.