ಕುಶಾಲನಗರ: ತಾಲ್ಲೂಕಿನ ವಿವಿಧೆಡೆ ಗುರುವಾರ ಸಂಜೆ ವರುಣನ ಸಿಂಚನವಾಗಿದೆ.
ಮಧ್ಯಾಹ್ನದಿಂದಲೇ ಮೋಡಕವಿದ ವಾತಾವರಣ ಇತ್ತು. ಸಂಜೆ ಕುಶಾಲನಗರ, ಮುಳ್ಳುಸೋಗೆ, ಕೂಡಿಗೆ, ಹೆಬ್ಬಾಲೆ, ಅಳುವಾರ, ಸಿದ್ಧಲಿಂಗಪುರ, ಬಾಣವಾರ, ಅಲೂರು ಸೇರಿದಂತೆ ವಿವಿಧೆಡೆ ಕೆಲಕಾಲ ತುಂತುರು ಮಳೆ ಸುರಿಯಿತು. ಇದರಿಂದ ಬಿಸಿಲಿನ ಧಗೆಯಿಂದ ಕೂಡಿದ್ದ ವಾತಾವರಣ ಸ್ವಲ್ಪ ಮಟ್ಟಿಗೆ ತಂಪಾಯಿತು. ಆದರೆ ನಿರೀಕ್ಷೆಯಂತೆ ಮಳೆ ಬಾರದ ಹಿನ್ನೆಲೆಯಲ್ಲಿ ರೈತಾಪಿ ವರ್ಗಕ್ಕೆ ನಿರಾಸೆ ಉಂಟಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.