ಕುಶಾಲನಗರ: ಶಿಕ್ಷಕರು ಅರ್ಪಣಾ ಮನಸ್ಸಿನಿಂದ ತೊಡಗಿಸಿಕೊಂಡರೆ ಸರ್ಕಾರಿ ಶಾಲೆಯ ಅಭಿವೃದ್ಧಿ ಸಾಧ್ಯ ಎಂದು ಸೋಮವಾರಪೇಟೆ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಭಾಗಮ್ಮ ಹೇಳಿದರು.
ರಂಗಸಮುದ್ರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಸ್ತು ಪ್ರದರ್ಶನ, ಮಕ್ಕಳ ಸ್ವರಚಿತ ಕವನರಚನೆ, ಓದುವ ಕಾರ್ಯಕ್ರಮದಲ್ಲಿ ‘ಮಕರಂದ’ ಮಕ್ಕಳ ಬರಹಗಳ ಕೃತಿಯನ್ನು ಅನಾವರಣಗೊಳಿಸಿ ಅವರು ಮಾತನಾಡಿದರು.
ಮಕ್ಕಳ ಬೆಳವಣಿಗೆಗೆ ಈ ರೀತಿಯ ವಿವಿಧ ಪಠ್ಯೇತರ ಚಟುವಟಿಕೆಗಳು ತುಂಬ ಅಗತ್ಯ ಎಂದರು. ಸ್ವತಃ ಮಕ್ಕಳೇ ಕವಿತೆ ರಚಿಸಿರುವುದು ಶ್ಲಾಘನೀಯ. ಎಲ್ಲ ಶಾಲೆಗಳು ಹಮ್ಮಿಕೊಳ್ಳುವಂತೆ ಆಗಬೇಕು ಎಂದರು.
ಕೊಡಗು ಜಿಲ್ಲಾ ಪ್ರಾಥಮಿಕ ಶಾಲೆಯ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಎಚ್.ಎನ್.ಮಂಜುನಾಥ್ ಉದ್ಘಾಟಿಸಿದರು.
ಶಿಕ್ಷಕಿ ರಮ್ಯಾ ಮೂರ್ನಾಡು ಕೃತಿಯ ಕುರಿತು ಅನಿಸಿಕೆ ವ್ಯಕ್ತಪಡಿಸಿದರು. ಸಾಹಿತಿ ಕೃಪಾದೇವರಾಜ್ ಮಾತನಾಡಿದರು.
ಸೋಮವಾರಪೇಟೆ ತಾಲ್ಲೂಕು ಶಿಕ್ಷಕ ಸಂಘದ ಅಧ್ಯಕ್ಷ ಬಸವರಾಜು, ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೇಶವ, ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿಗಳಾದ ಸುಷ್ಮಾ, ವೈಶಾಲಿ, ಮುಖ್ಯಶಿಕ್ಷಕಿ ಲೀಲಾವತಿ, ಸಹ ಶಿಕ್ಷಕರಾದ ಸುನೀತಾ, ವೀಣಾ, ರಜನಿ, ಪವಿತ್ರಾ ಹಾಗೂ ಪೋಷಕರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.