
ನಾಪೋಕ್ಲು: ಇಲ್ಲಿನ ಲಯನ್ಸ್ ಕ್ಲಬ್ ವತಿಯಿಂದ ಆಯೋಜಿಸಿದ್ದ ಲಯನ್ಸ್ ವಲಯ ಸಮ್ಮೇಳನದಲ್ಲಿ ಕ್ಲಬ್‌ನ ಹಿರಿಯ ಸದಸ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕೊಡವ ಸಮಾಜದ ಅಪ್ಪಚ್ಚ ಕವಿ ಸಭಾಂಗಣದಲ್ಲಿ ಆಯೋಜಿಸಿದ್ದ ಲಯನ್ಸ್ ರೀಜನ್ ಮೀಟ್ -ಬೆಸುಗೆ ಸಮ್ಮೇಳನದಲ್ಲಿ ಇಲ್ಲಿಯ ಲಯನ್ಸ್ ಕ್ಲಬ್ಬಿನ ಹಿರಿಯ ಸದಸ್ಯರಾದ ಬೊಪ್ಪೇರ ಕಾವೇರಪ್ಪ ಹಾಗೂ ಸರ್ವೆ ಆಫ್ ಇಂಡಿಯಾ ನಿವೃತ ಅಧಿಕಾರಿ ಕೇಟೋಳಿರ ಎಸ್. ಕುಟ್ಟಪ್ಪ ಅವರು ಲಯನ್ಸ್ ಕ್ಲಬ್‌ನಲ್ಲಿ ಸಲ್ಲಿಸಿರುವ ಸುದೀರ್ಘ ಅವಧಿಬ ಸೇವೆಯನ್ನು ಪರಿಗಣಿಸಿ ಕ್ಲಬ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಲಯನ್ಸ್ ಕ್ಲಬ್‌ಗಳ ಪ್ರಾಂತೀಯ ಅಧ್ಯಕ್ಷ ಡಾ. ಕೋಟೆರ ಪಂಚಮ್ ತಿಮ್ಮಯ್ಯ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಮಾಜಿ ರಾಜ್ಯಪಾಲ ಅಭಿನಂದನ್ ಬಿ. ಶೆಟ್ಟಿ, ಲಯನ್ಸ್ ಪ್ರಾಂತಿಯ ರಾಯಭಾರಿ ಲಯನ್ ನವೀನ್ ಅಂಬೆಕಲ್, ವಲಯ ಅಧ್ಯಕ್ಷರಾದ ಬಿಂದ್ಯಾ ಗಣಪತಿ, ಪ್ರಾಂತ್ಯ ಅಧ್ಯಕ್ಷ ಸಿ.ಟಿ. ಅಪ್ಪಣ್ಣ ನಟರಾಜ ಕೆಸ್ತೂರು, ಸಮ್ಮೇಳನ ಅಧ್ಯಕ್ಷೆ ಲಯನ್ ಕೇಟೋಳಿರ ರತ್ನ ಚರ್ಮಣ್ಣ, ಕಾರ್ಯದರ್ಶಿ ಮುಕ್ಕಾಟಿರ ವಿನಯ್, ಖಜಾಂಚಿ ಎಳ್ತಡ ಬಿ. ಬೋಪಣ್ಣ, ನಾಪೋಕ್ಲು ಲಯನ್ಸ್ ಕ್ಲಬ್ ಅಧ್ಯಕ್ಷ ಮಾದೆಯಂಡ ಬಿ. ಕುಟ್ಟಪ್ಪ, ಕಾರ್ಯದರ್ಶಿ ಅಪ್ಪುಮಣಿಯoಡ ಬನ್ಸಿ ಭೀಮಯ್ಯ, ಖಜಾಂಜಿ ಅಪ್ಪಚೆಟ್ಟೋಳoಡ ವಸಂತ್ ಮುತ್ತಪ್ಪ, ಲಿಯೋ ಕ್ಲಬ್‌ನ ಅಧ್ಯಕ್ಷರಾದ ಬಿ.ಕೆ. ಕನ್ನಿಕ, ಕಾರ್ಯದರ್ಶಿ ಎಂ.ಪಿ. ಧ್ರುವ ದೇವಯ್ಯ, ಖಜಾಂಜಿ ಸಿ.ಅನನ್ಯ ಅಯ್ಯಪ್ಪ, ಪ್ರಾಂತ್ಯಕ್ಕೆ ಒಳಪಟ್ಟ ಲಯನ್ಸ್ ಕ್ಲಬ್‌ಗಳ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.