ADVERTISEMENT

ಮಡಿಕೇರಿ | ಯುವ ದಸರಾ: ಚಂದನ್‌ಶೆಟ್ಟಿ ಮೋಡಿಗೆ ಸೋತ ಯುವ ಸಮೂಹ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2023, 6:13 IST
Last Updated 22 ಅಕ್ಟೋಬರ್ 2023, 6:13 IST
<div class="paragraphs"><p>ಮಡಿಕೇರಿಯ ಗಾಂಧಿ ಮೈದಾನದಲ್ಲಿ ಶನಿವಾರ ರಾತ್ರಿ ನಡೆದ ಯುವ ದಸರೆ ಕಾರ್ಯಕ್ರಮದಲ್ಲಿ ಗಾಯಕ ಚಂದನ್ ಶೆಟ್ಟಿ ಹಾಡಿ ಜನಮನವನ್ನು ರಂಜಿಸಿದರು</p><p></p></div>

ಮಡಿಕೇರಿಯ ಗಾಂಧಿ ಮೈದಾನದಲ್ಲಿ ಶನಿವಾರ ರಾತ್ರಿ ನಡೆದ ಯುವ ದಸರೆ ಕಾರ್ಯಕ್ರಮದಲ್ಲಿ ಗಾಯಕ ಚಂದನ್ ಶೆಟ್ಟಿ ಹಾಡಿ ಜನಮನವನ್ನು ರಂಜಿಸಿದರು

   

ಮಡಿಕೇರಿ: ಇಲ್ಲಿನ ಗಾಂಧಿ ಮೈದಾನ ಶನಿವಾರ ಯುವ ಮನಸ್ಸುಗಳಿಂದ ಭರ್ತಿಯಾಗಿತ್ತು. ಹಲವು ಯುವ ಕಲಾವಿದರ ಮೋಡಿಗೆ ಅಕ್ಷರಶಃ ಒಳಗಾಯಿತು. ಸಾವಿರಾರು ಮಂದಿ ಇತರ ಕಲಾವಿದರ ಕಾರ್ಯಕ್ರಮಗಳನ್ನು ಕಣ್ತುಂಬಿಕೊಂಡರು.

ADVERTISEMENT

ಗಾಯಕ ಚಂದನ್‌ ಶೆಟ್ಟಿ ವೇದಿಕೆಗೆ ಬರುವಷ್ಟರಲ್ಲಿ ರಾತ್ರಿ 10.30 ದಾಟಿತ್ತು. ಅವರು ವೇದಿಕೆಗೆ ಬರುವಷ್ಟರಲ್ಲಿ ಯುವ ಅಭಿಮಾನಿಗಳು ಭರಪೂರ ಕರತಾಡನದ ಮೂಲಕ ಸ್ವಾಗತಿಸಿದರು. ಕಿವಿಗಡಚಿಕ್ಕುವ ಚಪ್ಪಾಳೆ, ಶಿಳ್ಳೆಗಳು ಇಡೀ ಗಾಂಧಿ ಮೈದಾನದಲ್ಲಿ ಕೇಳಿ ಬಂದು, ಸೇರಿದ್ದ ಯುವ ಮನಸ್ಸುಗಳನ್ನು ಪುಳಕಿತಗೊಳಿಸಿದವು.

ಯಾರ ಮಗಳು ತಾನೆ ಇವಳು ಲೈಟು ವೇಟು... ಲಕ ಲಕ ಲಕ... ಮೊದಲಾದ ಹಾಡಿಗೆ ಪ್ರೇಕ್ಷಕ ವೃಂದ ಹೆಜ್ಜೆ ಹಾಕಿತು.

ಶಾಸಕ ಡಾ.ಮಂತರ್‌ಗೌಡ ಕಾರ್ಯಕ್ರಮ ಉದ್ಘಾಟಿಸಿದರೆ, ಸಂಸದ ಪ್ರತಾಪಸಿಂಹ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಇದಕ್ಕೂ ಮುನ್ನ ನಡೆದ ‘ದಸರಾ ಸೈಕ್ಲಥಾನ್ 2023’ಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವರ್ನಿತ್ ನೇಗಿ ಚಾಲನೆ ನೀಡಿದರು.  ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ವೃತ್ತದಿಂದ ಆರಂಭವಾದ ಜಾಥಾ ಜನರಲ್ ತಿಮ್ಮಯ್ಯ ಸರ್ಕಲ್, ಹಳೆ ಖಾಸಗಿ ಬಸ್ ನಿಲ್ದಾಣ, ಇಂದಿರಾ ಗಾಂಧಿ ವೃತ್ತ, ಎಲ್‍ಐಸಿ ಮಾರ್ಗವಾಗಿ ಸಾಗಿ ಗಾಂಧಿ ಮೈದಾನದಲ್ಲಿ ಕೊನೆಗೊಂಡಿತು. 50ಕ್ಕೂ ಅಧಿಕ ಮಂದಿ ಸೈಕಲ್ ಪಟುಗಳು ಜಾಥಾದಲ್ಲಿ ಪಾಲ್ಗೊಂಡಿದ್ದರು. ನಂತರ ಬೈಕ್ ಸ್ಟಂಟ್‌ ನಡೆಸಲಾಯಿತು.

ಮಡಿಕೇರಿಯ ಗಾಂಧಿ ಮೈದಾನದಲ್ಲಿ ಶನಿವಾರ ರಾತ್ರಿ ನಡೆದ ಯುವ ದಸರಾದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳನ್ನು ಕಲಾವಿದರು ಪ್ರಸ್ತುತಪಡಿಸಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.