ಮಡಿಕೇರಿ: ‘ಬೆಳಕಿನ ದಸರೆ’ ಎಂದೇ ಹೆಸರಾದ ಮಡಿಕೇರಿ ದಸರೆಗೆ ಮುನ್ನುಡಿ ಬರೆಯುವ ಕರಗೋತ್ಸವಕ್ಕೆ ಸೆ. 22ರ ಸಂಜೆ 5ಕ್ಕೆ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಭೋಸರಾಜು ಚಾಲನೆ ನೀಡಲಿದ್ದಾರೆ.
ನಗರದ ನಾಲ್ಕು ಶಕ್ತಿ ದೇವತೆಗಳಾದ ಕೋಟೆ ಮಾರಿಯಮ್ಮ, ಕುಂದೂರುಮೊಟ್ಟೆ ಚೌಟಿ ಮಾರಿಯಮ್ಮ, ದಂಡಿನ ಮಾರಿಯಮ್ಮ ಹಾಗೂ ಕಂಚಿಕಾಮಾಕ್ಷಮ್ಮ ಅವರ ಕರಗಗಳನ್ನು ಹೊತ್ತ ಕರಗಧಾರಿಗಳು ಇಲ್ಲಿನ ಮಹದೇವಪೇಟೆಯ ಪಂಪಿನ ಕೆರೆ ಆವರಣದಿಂದ ಹೊರಡಲಿದ್ದಾರೆ. ಮಹದೇವಪೇಟೆಯ ಮುಖ್ಯ ರಸ್ತೆಯಲ್ಲಿ ಕರಗೋತ್ಸವ ನಡೆಯಲಿದೆ. ನವರಾತ್ರಿಯ ಅಷ್ಟೂ ದಿನ ಕರಗಧಾರಿಗಳು ನಗರದಲ್ಲಿ ಸಂಚರಿಸಲಿದ್ದಾರೆ. ಸೆ. 23ರಿಂದ ಅ.2ರವರೆಗೆ ಗಾಂಧಿ ಮೈದಾನದಲ್ಲಿ ನಿತ್ಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ಗೋಣಿಕೊಪ್ಪಲಿನ ಕಾವೇರಿ ದಸರಾ ಸಮಿತಿಯಿಂದ ದಸರಾ ಜನೋತ್ಸವಕ್ಕೂ ಚಾಲನೆ ದೊರೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.