ADVERTISEMENT

ನಿಷೇಧಾಜ್ಞೆಯಿಂದಾಗಿ 'ಮಡಿಕೇರಿ ಚಲೊ' ಮುಂದೂಡಿಕೆ: ಎಚ್.ಸಿ.ಮಹದೇವಪ್ಪ

ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆತ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2022, 10:07 IST
Last Updated 23 ಆಗಸ್ಟ್ 2022, 10:07 IST
ಎಚ್.ಸಿ.ಮಹದೇವಪ್ಪ
ಎಚ್.ಸಿ.ಮಹದೇವಪ್ಪ   

ಮಡಿಕೇರಿ: ಕೊಡಗು ಜಿಲ್ಲಾಡಳಿತ ಹೇರಿರುವ ನಿಷೇಧಾಜ್ಞೆಯಿಂದಾಗಿ ಆಗಸ್ಟ್ 26 ರಂದು ಕೈಗೊಳ್ಳಬೇಕಿದ್ದ 'ಮಡಿಕೇರಿ ಚಲೊ'ವನ್ನು ಮುಂದೂಡಲಾಗಿದೆ ಎಂದು ಕಾಂಗ್ರೆಸ್ ಮುಖಂಡ ಡಾ.ಎಚ್.ಸಿ.ಮಹದೇವಪ್ಪ ಇಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಯಾವುದೇ ಕಾರಣ ಇಲ್ಲದೇ ನಿಷೇಧಾಜ್ಞೆ ಜಾರಿಗೊಳಿಸಿರುವುದು ಅಸಂವಿಧಾನಾತ್ಮಕ ನಡೆ ಎಂದು ಟೀಕಿಸಿದ ಅವರು ಜಿಲ್ಲಾಡಳಿತ ಸಂಪೂರ್ಣ ವಿಫಲಗೊಂಡಿದೆ ಎಂದು ಹೇಳಿದರು.

ಸಿದ್ದರಾಮಯ್ಯ ಅವರು ಪ್ರಯಾಣಿಸುತ್ತಿದ್ದ ಕಾರಿಗೆ ಮೊಟ್ಟೆ ಹೊಡೆಯುವಂತಹ ಕೃತ್ಯ ಜರುಗಲು ಅವಕಾಶ ಮಾಡಿಕೊಟ್ಟು ತಪ್ಪು ಮಾಡಿದ ಜಿಲ್ಲಾಡಳಿತ ಈಗ ನಿಷೇಧಾಜ್ಞೆ ತರುವ ಮೂಲಕ ಮತ್ತೊಮ್ಮೆ ತಪ್ಪೆಸಗಿದೆ. ನಿಷೇಧಾಜ್ಞೆ ಮುಗಿದ ಬಳಿಕ 'ಮಡಿಕೇರಿ ಚಲೊ' ದಿನಾಂಕ ಪ್ರಕಟಿಸಲಾಗುವುದು ಎಂದರು‌.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.