ADVERTISEMENT

ಮಣಿಪಾಲ ಆಸ್ಪತ್ರೆಯ ಹೃದ್ರೋಗ ತಜ್ಞರು ಮಡಿಕೇರಿಯಲ್ಲಿ ಲಭ್ಯ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2024, 15:38 IST
Last Updated 13 ಡಿಸೆಂಬರ್ 2024, 15:38 IST
<div class="paragraphs"><p>ಆಸ್ಪತ್ರೆ</p></div>

ಆಸ್ಪತ್ರೆ

   

(ಸಾಂದರ್ಭಿಕ ಚಿತ್ರ)

ಮಡಿಕೇರಿ: ಮೈಸೂರಿನ ಮಣಿಪಾಲ ಆಸ್ಪತ್ರೆಯ ಹೃದ್ರೋಗ ತಜ್ಞ ಡಾ.ಎನ್.ಎಂ.ಡಾ.ಶರತ್ ಬಾಬು ಅವರು ಇಲ್ಲಿನ ನೀಲ್ ಮೆಡಿಕಲ್ಸ್ ಸಂಕೀರ್ಣದಲ್ಲಿ ಪ್ರತಿ ತಿಂಗಳ 2ನೇ ಗುರುವಾರ ಹೃದ್ರೋಗಿಗಳಿಗೆ ಚಿಕಿತ್ಸೆ ನೀಡಲಿದ್ದಾರೆ.

ADVERTISEMENT

‘ಮೈಸೂರಿನ ಮಣಿಪಾಲ ಆಸ್ಪತ್ರೆಯಲ್ಲಿ ಅತ್ಯಾಧುನಿಕ ಹೃದ್ರೋಗ ಚಿಕಿತ್ಸೆ ಲಭ್ಯವಿದೆ. ಕೊಡಗು ಜಿಲ್ಲೆಯ ಹೃದ್ರೋಗಿಗಳು ಚಿಕಿತ್ಸೆಗಾಗಿ ಪ್ರತಿ ತಿಂಗಳ 2ನೇ ಗುರುವಾರ ನಗರದ ನೀಲ್ ಮೆಡಿಕಲ್ಸ್ ಸಂಕೀರ್ಣಕ್ಕೆ ಭೇಟಿ ನೀಡಬಹುದು. ನೋಂದಣಿಗೆ ಮೊ: 9480363494 ನ್ನು ಸಂಪರ್ಕಿಸಬಹುದು' ಎಂದು ಶರತ್‌ಬಾಬು ಇಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಆಸ್ಪತ್ರೆಯಲ್ಲಿ ತಜ್ಞವೈದ್ಯರಾದ ಡಾ.ಸಿ.ಬಿ.ಕೇಶವಮೂರ್ತಿ, ಡಾ.ಉಪೇಂದ್ರ ಶೆಣೈ ಸೇರಿದಂತೆ ನುರಿತ ಹೃದ್ರೋಗ ತಜ್ಞರು ಚಿಕಿತ್ಸೆ ನೀಡಲಿದ್ದಾರೆ ಎಂದರು.

ನೋವು ಕಡಿಮೆ ಮಾಡುವ, ಅಪಾಯ ತೀರಾ ಕಡಿಮೆ ಇರುವ, ಆಸ್ಪತ್ರೆಯಲ್ಲಿ ಕೆಲವೇ ದಿನಗಳಷ್ಟೇ ದಾಖಲಾಗುವಂತಹ ಅತ್ಯಾಧುನಿಕವಾದ ಚಿಕಿತ್ಸಾ ವಿಧಾನಗಳು ಆಸ್ಪತ್ರೆಯಲ್ಲಿ ಲ‌ಭ್ಯವಿವೆ. ಜಿಲ್ಲೆಯ ಹೃದ್ರೋಗಿಗಳು ಪ್ರತಿ ತಿಂಗಳ 2ನೇ ಗುರುವಾರ ಭೇಟಿ ಮಾಡಿದರೆ ಸೂಕ್ತ ಚಿಕಿತ್ಸೆ ಹಾಗೂ ಸಲಹೆ ನೀಡಲಾಗುವುದು ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.