ADVERTISEMENT

ಓಟದ ಸ್ಪರ್ಧೆ: ಗೌತಮ್‌ ರಾಜ್ಯ ಮಟ್ಟಕ್ಕೆ ಆಯ್ಕೆ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2025, 3:48 IST
Last Updated 1 ಸೆಪ್ಟೆಂಬರ್ 2025, 3:48 IST
ಓಟದ ಸ್ಪರ್ಧೆಯಲ್ಲಿ ನಾಪೋಕ್ಲು ಸರ್ಕಾರಿ ಪದವಿ ಕಾಲೇಜು ಪ್ರತಿನಿಧಿಯಾಗಿ ಭಾಗವಹಿಸಿದ್ದ ವಿದ್ಯಾರ್ಥಿ ಗೌತಮ್ ಎಸ್. ಅವರನ್ನು ರೆಡ್‌ ರಿಬ್ಬನ್, ಆರೋಗ್ಯ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಗೌರವಿಸಲಾಯಿತು
ಓಟದ ಸ್ಪರ್ಧೆಯಲ್ಲಿ ನಾಪೋಕ್ಲು ಸರ್ಕಾರಿ ಪದವಿ ಕಾಲೇಜು ಪ್ರತಿನಿಧಿಯಾಗಿ ಭಾಗವಹಿಸಿದ್ದ ವಿದ್ಯಾರ್ಥಿ ಗೌತಮ್ ಎಸ್. ಅವರನ್ನು ರೆಡ್‌ ರಿಬ್ಬನ್, ಆರೋಗ್ಯ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಗೌರವಿಸಲಾಯಿತು   

ನಾಪೋಕ್ಲು: ಮಡಿಕೇರಿಯಲ್ಲಿ ರೆಡ್ ರಿಬ್ಬನ್, ಆರೋಗ್ಯ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ನಡೆದ 5 ಕಿ.ಮೀ ಓಟದ ಸ್ಪರ್ಧೆಯಲ್ಲಿ ನಾಪೋಕ್ಲು ಸರ್ಕಾರಿ ಪದವಿ ಕಾಲೇಜಿನ ತೃತೀಯ ಬಿ.ಎ ವಿದ್ಯಾರ್ಥಿ ಎಸ್‌.ಗೌತಮ್‌ ಮೊದಲನೇ ಸ್ಥಾನ ಪಡೆದು ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾದರು.

ಇವರಿಗೆ ₹5000 ನಗದು ಬಹುಮಾನ, ಪ್ರಮಾಣಪತ್ರ ಮತ್ತು ಪದಕ ನೀಡಿ ಗೌರವಿಸಲಾಯಿತು. ಗೌತಮ್ ಅವರು ವಿರಾಜಪೇಟೆ ನಿವಾಸಿ ಕೆ.ಶೇಖರ್ ಮತ್ತು ಎಸ್‌. ಶೋಭಾ ದಂಪತಿ ಪುತ್ರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT