ADVERTISEMENT

‘ಕಾಲತ್‌ರ ಕಳಿ’ ನೂತನ ಕೊಡವ ಚಲನಚಿತ್ರಕ್ಕೆ ಮುಹೂರ್ತ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2024, 2:33 IST
Last Updated 16 ಫೆಬ್ರುವರಿ 2024, 2:33 IST
ನಾಪೋಕ್ಲು ಸಮೀಪದ ಕಕ್ಕಬೆಯ ಪಾಡಿ  ಇಗ್ಗುತಪ್ಪ ದೇವಾಲಯದಲ್ಲಿ ‘ಕಾಲತ್‌ರ ಕಳಿ’ ಎಂಬ ನೂತನ ಕೊಡವ ಚಲನಚಿತ್ರಕ್ಕೆ ಗುರುವಾರ ಮುಹೂರ್ತ ಪೂಜೆ ಸಲ್ಲಿಸಲಾಯಿತು
ನಾಪೋಕ್ಲು ಸಮೀಪದ ಕಕ್ಕಬೆಯ ಪಾಡಿ  ಇಗ್ಗುತಪ್ಪ ದೇವಾಲಯದಲ್ಲಿ ‘ಕಾಲತ್‌ರ ಕಳಿ’ ಎಂಬ ನೂತನ ಕೊಡವ ಚಲನಚಿತ್ರಕ್ಕೆ ಗುರುವಾರ ಮುಹೂರ್ತ ಪೂಜೆ ಸಲ್ಲಿಸಲಾಯಿತು   

ನಾಪೋಕ್ಲು: ಸಮೀಪದ ಕಕ್ಕಬೆಯ ಪಾಡಿ ಶ್ರೀ ಇಗ್ಗುತಪ್ಪ ದೇವಾಲಯದಲ್ಲಿ ‘‌ಕಾಲತ್‌ರ ಕಳಿ’ ಎಂಬ ನೂತನ ಕೊಡವ ಚಲನಚಿತ್ರಕ್ಕೆ ಮುಹೂರ್ತ ಪೂಜೆ ಸಲ್ಲಿಸಲಾಯಿತು.

ಪಿ ಅಂಡ್ ಜಿ ಕ್ರಿಯೇಶನ್ಸ್ ಅಡಿಯಲ್ಲಿ ಬಾಳೆಯಡ ಪ್ರತಿಷ್ ಪೂವಯ್ಯ ಹಾಗೂ ಆಚೆಯಡ ಗಗನ್ ಗಣಪತಿ ನಿರ್ದೇಶನದ ನಾಲ್ಕನೇ ಕೊಡವ ಚಲನಚಿತ್ರ ಇದಾಗಿದ್ದು ಸೋಮೆಯಂಡ ಬೋಸ್ ಬೆಳ್ಳಿಯಪ್ಪ ಪ್ರೊಡಕ್ಷನ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದು ಚಿತ್ರೀಕರಣ ಆರಂಭಗೊಂಡಿತು.

ದೇವಾಲಯದ ಪಾರು ಪತ್ತೇಗಾರ ಪರದಂಡ ಪ್ರಿನ್ಸ್ ತಮ್ಮಯ್ಯ ಚಿತ್ರತಂಡದ ಪರವಾಗಿ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಿ ಯಾವುದೇ ವಿಘ್ನ, ಕುಂದುಕೊರತೆಗಳಾಗದಂತೆ ಸುಸೂತ್ರವಾಗಿ ಚಲನಚಿತ್ರ ಪೂರ್ಣಗೊಳ್ಳಲಿ’ ಎಂದರು.

ADVERTISEMENT

ಚಲನಚಿತ್ರದ ನಿರ್ದೇಶಕ ಆಚೆಯಡ ಗಗನ್ ಗಣಪತಿ ಮಾತನಾಡಿ, ‘ಕೊಡವ ಭಾಷೆ ನೂತನ ಸಿನಿಮಾ ಉತ್ತಮ ಚಿತ್ರಕಥೆಯನ್ನು ಹೊಂದಿದೆ. ಈಗಿನ ಕಾಲಘಟ್ಟದಲ್ಲಿ ನಡೆಯುವ ಸಾಮಾಜಿಕ ದುಷ್ಪರಿಣಾಮಗಳ ಕುರಿತ ಸಿನಿಮಾ ಇದಾಗಿದ್ದು ಸಾಮಾಜಿಕ ಕಳಕಳಿಯನ್ನು ಹೊಂದಿದೆ. ಎಲ್ಲರೂ ವೀಕ್ಷಿಸಿ, ಪ್ರೋತ್ಸಾಹಿಸಬೇಕು’ ಎಂದರು.

ಸೋಮೆಯಂಡ ಬೋಸ್ ಬೆಳ್ಳಿಯಪ್ಪ ಮಾತನಾಡಿ, ‘ಹಲವು ಕಿರು ಚಿತ್ರಗಳನ್ನು ಈಗಾಗಲೇ ನಿರ್ಮಿಸಿದ್ದು ನೂತನ ಸಿನಿಮಾ ಉತ್ತಮ ಚಿತ್ರಕಥೆಯನ್ನು ಹೊಂದಿದೆ’ ಎಂದರು.

‘ಕಾಲತ್‌ರ ಕಳಿ ಚಿತ್ರ ತಾರಾಗಣದಲ್ಲಿ ತಾತಂಡ ಪ್ರಭ, ಗೋಪುಡ ದೇಸ್ನ ದೇಚಮ್ಮ, ಮಾಚೇಟಿರ ವಿಕಾಸ್, ಚೇನಂಡ ಗಿರೀಶ್ , ಸಪ್ನಾ , ಪಾಲೆಯಡ ಸುಚಿತ್ರ ಸುಬ್ಬಯ್ಯ, ಸುಮಿತ್ರಾ, ಶ್ಯಾಮಲಾ ಸೇರಿದಂತೆ 50ಕ್ಕೂ ಹೆಚ್ಚು ಕಲಾವಿದರು ಇದ್ದಾರೆ. ಛಾಯಾಗ್ರಹಣ ಮತ್ತು ಸಂಕಲನವನ್ನು ಚಂದ್ರಶೇಖರ್ (ಪಾಪು) ನಿರ್ವಹಿಸುತ್ತಿದ್ದಾರೆ’ ಎಂದು ಬಾಳೆಯಡ ಪ್ರತಿಷ್ ಪೂವಯ್ಯ ಮಾಹಿತಿ ನೀಡಿದರು.

ಅಖಿಲ ಕೊಡವ ಸಮಾಜದ ಅಧ್ಯಕ್ಷ ಪರದಂಡ ಸುಬ್ರಮಣಿ, ನಾಪೋಕ್ಲು ಕೊಡವ ಸಮಾಜದ ಅಧ್ಯಕ್ಷ ಮುಂಡಂಡ ನಾಣಯ್ಯ, ಲೆಫ್ಟಿನಲ್ ಬಿದ್ದಂಡ ನಾಣಯ್ಯ, ಅಲ್ಲಾರಂಡ ವಿಠಲ ಹಾಗೂ ಚಿತ್ರತಂಡದ ಸದಸ್ಯರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.