ಶಿಶು ಸಾವು (ಸಾಂದರ್ಭಿಕ ಚಿತ್ರ)
ಮಡಿಕೇರಿ: 15 ವರ್ಷದ ಬಾಲಕಿಗೆ ಜನಿಸಿದ್ದ ನವಜಾತ ಶಿಶುವಿನ ಮೃತದೇಹ ಬಾಲಕಿಯ ಮನೆಯಿಂದ ಸುಮಾರು 1 ಕಿ.ಮೀ ದೂರದಲ್ಲಿ ಪತ್ತೆಯಾಗಿದೆ. ಮೃತದೇಹವು ಕೊಳೆತು ಹೋಗಿದ್ದು, ಡಿಎನ್‌ಎ ಸಂಗ್ರಹಕ್ಕಾಗಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಾಲಕಿಯ ತಂದೆಯನ್ನು ವಿಚಾರಣೆ ನಡೆಸಿದಾಗ ಮಗು ಅ. 14ರಂದೇ ಜನಿಸಿದ್ದು, ಕೂಡಲೇ ಮೃತಪಟ್ಟಿತು. ಇದರಿಂದ ಹೆದರಿಕೆಯಾಗಿ ಮಗುವಿನ ಮೃತದೇಹವನ್ನು ಎಸೆಯಲಾಯಿತು ಎಂದು ಹೇಳಿ ಅವರೇ ಶಿಶುವನ್ನು ಎಸೆದಿದ್ದ ಜಾಗವನ್ನು ತೋರಿಸಿದರು ಎಂದು ಅವರು ಹೇಳಿದ್ದಾರೆ.
ಬಾಲಕಿಗೆ ಜನಿಸಿದ ನವಜಾತ ಶಿಶುವನ್ನು ನಾಪತ್ತೆ ಮಾಡಿದ ಆರೋಪದ ಮೇರೆಗೆ ಜಿಲ್ಲೆಯ ಠಾಣೆಯೊಂದರಲ್ಲಿ ತಂದೆ– ತಾಯಿಯ ವಿರುದ್ಧ ಮಂಗಳವಾರವಷ್ಟೇ ಪ್ರಕರಣ ದಾಖಲಾಗಿತ್ತು. ಇದಕ್ಕೂ ಮುನ್ನ ಬಾಲಕಿ ಗರ್ಭಿಣಿಯಾಗಲು ಕಾರಣನಾದ ಆರೋಪದ ಮೇರೆಗೆ 14 ವರ್ಷದ ಬಾಲಕನ ವಿರುದ್ಧ ಪೋಕ್ಸೊ ಪ್ರಕರಣ ದಾಖಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.