
ಸೋಮವಾರಪೇಟೆ: ತಾಲ್ಲೂಕಿನ ಮುಳ್ಳೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಹೊಸ ವರ್ಷವನ್ನು ಹೊಸ ವರ್ಷ-ಹೊಸ ಚಿಂತನೆ -ಹೊಸ ನಡೆ ಎಂಬ ಧ್ಯೇಯ ವಾಕ್ಯದೊಂದಿಗೆ ಆಚರಿಸಲಾಯಿತು.
ಗುರುವಾರ ಬೆಳಿಗ್ಗೆ ಶಾಲಾ ಆವರಣದಲ್ಲಿ ಸಂಕಲ್ಪ ಕುಟೀರದಲ್ಲಿ ನವ ವರ್ಷದ ಸಂಸ್ಕೃತ ಶ್ಲೋಕದೊಂದಿಗೆ ದೀಪ ಬೆಳಗಿಸಿ ಪ್ರಾರ್ಥಿಸಿದರು. ಈ ವರ್ಷದಲ್ಲಿ ತಾನು ಏನೆಲ್ಲಾ ಕಾರ್ಯಗಳನ್ನು ಮಾಡುತ್ತೇನೆ ಎಂದು ಶಿಕ್ಷಕರೊಂದಿಗೆ ಚರ್ಮಿಸಿ ತೀರ್ಮಾನಿಸಿದರು. ತದನಂತರ ಕಳೆದ ವರ್ಷ ನಾನೇನು ಮಾಡಿದೆ ಎಂಬುದನ್ನು ಸ್ಮೃತಿ ಕುಟೀರದಲ್ಲಿ ಕುಳಿತು ವಿಮರ್ಶಿಸಿ ಸಾಧಕ ಬಾಧಕಗಳ ಪಟ್ಟಿ ಮಾಡಿದರು. ಪ್ರತಿಜ್ಞಾವಿಧಿ ಸ್ವೀಕಾರ ಮಾಡುವುದರ ಮೂಲಕ ಈ ವರ್ಷ ನಾವು ಹೇಗೆ ನಡೆದುಕೊಳ್ಳುತ್ತೇವೆ ಎಂಬುದನ್ನು ಪ್ರಮಾಣೀಕರಿಸಿ ತಿಳಿಸಿದರು.
ಹೊಸ ವರ್ಷದ ಹಿನ್ನೆಲೆ ಶಾಲೆಯು ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ಶಾಲಾ ಮುಖ್ಯ ಶಿಕ್ಷಕ ಸತೀಶ್ ಸೇರಿದಂತೆ ಶಾಲಾ ಶಿಕ್ಷಕರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.